ವಿದ್ಯುತ್ ಸ್ಪರ್ಶಗೊಂಡು ತಾಯಿ-ಮಗ ಸ್ಥಳದಲ್ಲೇ ಮೃತ್ಯು

Death, deadbody, Waterfall

(ನ್ಯೂಸ್ ಕಡಬ)newskadaba.com ಲಕ್ನೋ, ಆ.09. ಮೊಬೈಲ್ ಚಾರ್ಜ್ ಹಾಕುವ ವೇಳೆ ವಿದ್ಯುತ್ ಶಾಕ್ ತಗುಲಿ 15 ವರ್ಷದ ಬಾಲಕ ಮೃತಪಟ್ಟಿದ್ದು, ಬಾಲಕನನ್ನು ರಕ್ಷಿಸಲು ಯತ್ನಿಸಿದಾಗ ಆತನ ತಾಯಿಗೂ ವಿದ್ಯುತ್ ಸ್ಪರ್ಶವಾಗಿ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ.


ಈ ಬಗ್ಗೆ ಪೊಲೀಸ್ ಅಧಿಕಾರಿ ಮಹೇಶ್ ಪಾಂಡೆ ಮಾತನಾಡಿ ” ವಿದ್ಯುತ್ ಸ್ಪರ್ಶದಿಂದ ತಾಯಿ-ಮಗ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ. ರೋಹಿತ್ ಜೈಸ್ವಾಲ್ (15) ಬಾಲಕ ರಾತ್ರಿ ತನ್ನ ತಾಯಿ ರಾಮ್ ಸಹೇಲಿಯೊಂದಿಗೆ ತಮ್ಮ ಮನೆಯೊಳಗೆ ಮಲಗಿದ್ದರು. ರಾತ್ರಿ ಎಚ್ಚರಗೊಂಡು ಮೊಬೈಲ್ ಚಾರ್ಜ್ ಮಾಡಲು ಹೋಗಿದ್ದ, ಆ ವೇಳೆ ರೋಹಿತ್ಗೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ಕಂಡ ತಾಯಿ ಆತನನ್ನು ರಕ್ಷಿಸಲು ಯತ್ನಿಸಿದರಾದರೂ ಆಕೆಯೂ ಕೂಡ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ► ಸಾಧಕ ಮಹಿಳೆಯರಿಂದ ಅರ್ಜಿ ಆಹ್ವಾನ


ನಂತರ ಕುಟುಂಬ ಸದಸ್ಯರು ಕೋಣೆಯಲ್ಲಿ ತಾಯಿ-ಮಗ ಇಬ್ಬರೂ ಶವವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಕುಟುಂಬದವರು ಶವಪರೀಕ್ಷೆಗೆ ನಿರಾಕರಿಸಿ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ ಎಂದು ವರದಿಯಾಗಿದೆ.

error: Content is protected !!
Scroll to Top