ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ – ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.


ಶೀಘ್ರಲಿಪಿ ಮತ್ತು ಬೆರಳಚ್ಚು ಕೌಶಲ್ಯ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಅರ್ಜಿಯನ್ನು ಜಾಲತಾಣ https://ssc.nic.in ದಲ್ಲಿ ಆಗಸ್ಟ್ 23, 2023 ರೊಳಗೆ ಸಲ್ಲಿಸಬೇಕು. ಸಂಪರ್ಕಕ್ಕಾಗಿ 080-25502520 ನ್ನು ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಂಪರ್ಕಿಸಬಹುದು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಎಸ್ಎ್ಸ್ಸಿಭ ಮುಖ್ಯ ಕಚೇರಿ ನವದೆಹಲಿಯ ಜಾಲತಾಣ https://ssc.nic.in ಮತ್ತು ಎಸ್ಎರಸ್ಸಿಿ ಸ್ಥಳೀಯ ಕಚೇರಿ ಬೆಂಗಳೂರಿನ (ಕರ್ನಾಟಕ-ಕೇರಳ, ಲಕ್ಷ ದ್ವೀಪ ಪ್ರದೇಶದ ಪರೀಕ್ಷಾ ಕೇಂದ್ರಗಳು) ಜಾಲತಾಣ www.ssckkr.kar.nic.in ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು :ಶಕ್ತಿ ವಸತಿ ಶಾಲೆಯಲ್ಲಿ ಕ್ರಿಸ್‍ಮಸ್‍ಆಚರಣೆ

error: Content is protected !!
Scroll to Top