ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನ – ಇಬ್ಬರು ಆರೋಪಿಗಳು ಅರೆಸ್ಟ್



(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಘು ಮತ್ತು ಮುರುಳಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.








ರಘು ಮತ್ತು ಮುರುಳಿ ಬೈಕ್ ನಲ್ಲಿ ಕಾರೊಂದನ್ನು ಹಿಂಬಾಲಿಸಿಕೊಂಡು ಬಂದಿದ್ದು, ವೈಟ್ ಫಿಲ್ಡ್ ನ ಸಿದ್ದಾಪುರ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನ ಬಳಿ ಬಂದು ಚಾಲಕನಿಗೆ ಕಾರಿನಿಂದ ಕೆಳಗೆ ಇಳಿಯಲು ಹೇಳಿದ್ದರು. ಚಾಲಕ ಕೆಳಗೆ ಇಳಿಯದಿದ್ದಾಗ ಕಲ್ಲಿನಿಂದ ಕಾರಿನ ಗಾಜನ್ನು ಒಡೆಯಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಘಟನೆಯ ದೃಶ್ಯಗಳನ್ನು ವ್ಯಕ್ತಿಯೋರ್ವರು ಟ್ವೀಟ್ ಮಾಡಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಮಾಡಲಾಗಿತ್ತು.






error: Content is protected !!
Scroll to Top