ನಿಷೇಧಿತ ಎಂಡಿಎಂಎ ಮಾರಾಟ- ರಿಕ್ಷಾ ಚಾಲಕ ಅರೆಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ, 07. ಪೊಲೀಸ್ ಠಾಣಾ ವ್ಯಾಪ್ತಿಯ ಇಲ್ಲಿನ ಕುಂಪಲದ ಭಗಂಬಿಲ ಸ್ಮಶಾನದ ಮೈದಾನದಲ್ಲಿ ಸಾರ್ವಜನಿಕವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ  ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.

 

ಬಂಧಿತ ಆರೋಪಿಯನ್ನು ಶಾಂತಿಬಾಗ್ ನಿವಾಸಿ ಮಹಮ್ಮದ್ ಶರೀಫ್ ಯಾನೆ ಫೈಝಲ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ 12 ಗ್ರಾಂ. ಎಂಡಿಎಂಎ ಮಾದಕ ವಸ್ತು ಹಾಗೂ ಎರಡು ಮೊಬೈಲ್ ಫೋನ್ ಸಮೇತ ಮಾದಕ ವಸ್ತುವನ್ನು ಮಾರಾಟ ಮಾಡಲು ಉಪಯೋಗಿಸಿದ ಆಟೋರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಹಲವು ವರ್ಷಗಳಿಂದ ತನ್ನ ರಿಕ್ಷಾವನ್ನು ಕೂಡ ಅಪರಿಮಿತ ವೇಗದಿಂದ ಚಲಾಯಿಸುತ್ತಿದ್ದು, ಹಲವು ರೀತಿಯ ಅಪಘಾತಗಳು ಸ್ವಲ್ಪ ಅಂತರದಲ್ಲಿ ತಪ್ಪಿದ್ದವು ಎಂದೆನ್ನಲಾಗಿದೆ.

Also Read  ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

error: Content is protected !!
Scroll to Top