ಬಾಲಕಿ ಮೇಲೆ ಅತ್ಯಾಚಾರ; ಪ್ರಾಂಶುಪಾಲ ನನ್ನು ಗಲ್ಲಿಗೇರಿಸಿ – ಯತ್ನಾಳ್ ಆಗ್ರಹ ..!



(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.05. ಖಾಸಗಿ ಶಾಲೆಯೊಂದರ ಪ್ರಾಂಶುಪಾಲ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿ ಮೇಲೆ ಹೇಯ ಕೃತ್ಯ ಎಸಗಿದ 65 ವರ್ಷದ ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.







ಗಲ್ಲಿಗೆ ಏರಿಸಬೇಕಾಗಿ ಯತ್ನಾಳ್ ರವರು ಆಗ್ರಹಿಸಿದ್ದಾರೆ. ಶಾಲೆ ಸಂಸ್ಥಾಪಕನೇ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ತನ್ನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಬೆಳಗ್ಗೆ 11.30ರ ಸುಮಾರಿಗೆ ತನ್ನ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ತಿಳಿದುಬಂದಿದೆ. ಘಟನೆ ಕುರಿತು ಯಾರೊಂದಿಗೂ ತಿಳಿಸದಂತೆ ಕೊಠಡಿಯಿಂದ ಹೊರಗಡೆ ಕಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.






error: Content is protected !!
Scroll to Top