ನದಿ ದಡದಲ್ಲಿದ್ದ ಪಂಪ್ ಸೆಟ್ ಕಳವು – ನಾಲ್ವರು ಅರೆಸ್ಟ್

(ನ್ಯೂಸ್ ಕಡಬ)newskadaba.com ಬೈಲಹೊಂಗಲ, ಆ.05. ಮಲಪ್ರಭಾ ನದಿಯ ದಡದಲ್ಲಿ ರೈತರು ಅಳವಡಿಸಿದ್ದ ವಿದ್ಯುತ್‌ ಪಂಪ್ ಸೆಟ್‌ ಗಳ ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಪಂಪ್‌ಸೆಟ್‌ ಹಾಗೂ ವಾಹನ ಸೇರಿ ₹5ಲಕ್ಷ ಮೌಲ್ಯದ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.


ಮಲಪ್ರಭಾ ನದಿಯ ದಂಡೆಯ ಜಾಕ್‌ವೆಲ್ ಹತ್ತಿರ ಹೊಸೂರು ಗ್ರಾಮದ ರೈತರು ಈ ಪಂಪ್‌ ಸೆಟ್‌ಗಳನ್ನು ಅಳವಡಿಸಿದ್ದರು. ಈಚೆಗೆ ಕಳ್ಳತನ ಮಾಡಿದ ಬಗ್ಗೆ ಮುರಗೋಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಮುರಗೋಡ ಪೊಲೀಸರು ಸಾಮಗ್ರಿಗಳ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Also Read  ಪುತ್ತೂರಿನಲ್ಲಿ ನಡೆದ ಒಂಟಿ ವೃದ್ದೆಯ ಹತ್ಯೆ ಪ್ರಕರಣ ➤ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

error: Content is protected !!
Scroll to Top