ಕಳ್ಳನೋರ್ವನ ಮೇಲೆ ಮನೆ ಮಾಲೀಕನಿಂದ ಗುಂಡಿನ ದಾಳಿ  

 (ನ್ಯೂಸ್ ಕಡಬ) newskadaba.com   ಬೆಂಗಳೂರು, ಡಿ.14. ಕಳ್ಳನ ಮೇಲೆ ಮನೆ ಮಾಲೀಕನೋರ್ವ ಗುಂಡು ಹಾರಿಸಿದ ಘಟನೆ ಬಾಗಲಕೋಟೆಯಲ್ಲಿ ಸಂಭವಿಸಿದ್ದು, ಕಳ್ಳನೊಬ್ಬ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

 

ಆರೋಪಿಯನ್ನು ಲಕ್ಷ್ಮಣ್ ಎಂದು ಗುರುತಿಸಲಾಗಿದೆ.  ನಾಯಿಗಳು ಬೊಗಳುವ ಸದ್ದಿಗೆ ಎಚ್ಚರಗೊಂಡ ಮನೆ ಮಾಲೀಕ ಹೊರಗೆ ಬಂದಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಗಾಯಗೊಂಡಿದ್ದ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದುಬಂದಿದೆ.

Scroll to Top