ಇನ್ಮುಂದೆ ಡೇಟಾ ಇಲ್ಲದೇ ಮೊಬೈಲ್‌ನಲ್ಲೇ ಟಿವಿ ಚಾನೆಲ್‌ ನೇರಪ್ರಸಾರ – ಮಹತ್ಕಾರ್ಯಕ್ಕೆ ಮುಂದಾದ ಕೇಂದ್ರ

(ನ್ಯೂಸ್ ಕಡಬ) newskadaba.com  ಆ. 05. ಇನ್ನು ಮುಂದೆ ಡೇಟಾ ಸಂಪರ್ಕವಿಲ್ಲದೇ  ಡಿಟಿಹೆಚ್ ಮಾದರಿಯಲ್ಲಿ ಮೊಬೈಲ್ ಫೋನ್‌ಗಳಲ್ಲಿ ಟಿವಿ ಚಾನೆಲ್‌ಗಳನ್ನು ನೇರಪ್ರಸಾರ ಮಾಡುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಡೈರೆಕ್ಟ್-ಟು-ಮೊಬೈಲ್ ಎಂದು ಕರೆಯಲ್ಪಡುವ ತಂತ್ರಜ್ಞಾನವು ಮೊಬೈಲ್ ಫೋನ್ ಬಳಕೆದಾರರು ತಮ್ಮ ಸಾಧನಗಳಲ್ಲಿ ಕೇಬಲ್ ಅಥವಾ DTH ಸಂಪರ್ಕದ ಮೂಲಕ ಟಿವಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ದೂರಸಂಪರ್ಕ ಇಲಾಖೆ ಮಾಹಿತಿ, ಪ್ರಸಾರ ಸಚಿವಾಲಯ ಮತ್ತು IIT-ಕಾನ್ಪುರ್ ವಿವರಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ವರದಿಯ ಪ್ರಕಾರ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ DoT, MIB, IIT-ಕಾನ್‌ಪುರದ ಅಧಿಕಾರಿಗಳು ಹಾಗೂ ದೂರಸಂಪರ್ಕ ಮತ್ತು ಪ್ರಸಾರ ಉದ್ಯಮಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Also Read  9,999 ರೂ. ಗೆ ಹೊಸ ಇನ್ಫಿನಿಕ್ಸ್​ ಫೋನ್ ಬಿಡುಗಡೆ

error: Content is protected !!
Scroll to Top