ಮಂಗಳೂರು ವಿವಿ: ಪದವಿ ತರಗತಿ ಇನ್ನೂ ವಿಳಂಬ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 04. ವಿವಿಧ ಪದವಿ ಸೆಮಿಸ್ಟರ್‌ ಪರೀಕ್ಷೆಗಳು ಇನ್ನೂ ನಡೆಯುತ್ತಿರುವುದರಿಂದ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಈ ವರ್ಷವೂ ಪದವಿ ತರಗತಿಗಳು ವಿಳಂಬವಾಗಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಆ. 14ರಿಂದ ಪದವಿ ತರಗತಿಗಳನ್ನು ಆರಂಭಿಸಲು ನಿಗದಿಪಡಿಸಲಾಗಿದೆ. ಆದರೆ ವಿವಿಯ 2, 4 ಹಾಗೂ 6ನೇ ಸೆಮಿಸ್ಟರ್‌ ಪರೀಕ್ಷೆಗಳು ಜುಲೈ 18ರ ಬಳಿಕ ಆರಂಭವಾಗಿದ್ದು, ಮಳೆಯ ಕಾರಣ ರದ್ದಾದ ಪರೀಕ್ಷೆಗಳ ಸಹಿತ ಆ. 16ರ ವರೆಗೆ ನಡೆಯಲಿವೆ. ಆ ಬಳಿಕ ಮೌಲ್ಯಮಾಪನ ನಡೆಯಬೇಕಿದೆ. ಇತ್ತ ಉಪನ್ಯಾಸಕರೆಲ್ಲ ಮೌಲ್ಯಮಾಪನಕ್ಕೆ ಹೋದರೆ ಹೊಸ ಪದವಿ ತರಗತಿ ಆರಂಭಿಸುವುದು ಹೇಗೆ ಎಂಬುದೇ ಪ್ರಶ್ನೆಯಾಗಿದೆ.

Also Read  7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಮುಂಬೈನಲ್ಲಿ ಅರೆಸ್ಟ್..!

ಆ. 14ರಂದು 2024ನೇ ಸಾಲಿನ ಪದವಿ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ. ಆದರೆ ಪರೀಕ್ಷೆ ಹಾಗೂ ಮೌಲ್ಯಮಾಪನ ಇರುವುದರಿಂದ ಕಷ್ಟವಾಗಬಹುದು ಎಂದು ಪ್ರಾಧ್ಯಾಪಕರು ವಿ.ವಿ. ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಆ. 8ರಂದು ನಡೆಯುವ ವಿ.ವಿ. ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಪ್ರಕಟಿಸಲಾಗುವುದು ಎಂದು ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ| ಜಯರಾಜ್‌ ಅಮೀನ್‌ ಅವರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

error: Content is protected !!
Scroll to Top