ಬಳಕೆದಾರರಿಗೆ ವಿಡಿಯೋ ಡೌನ್ ಲೋಡ್ ಗೆ ಅವಕಾಶ ನೀಡಿದ ‘ಎಕ್ಸ್’

(ನ್ಯೂಸ್ ಕಡಬ) newskadaba.com ವದೆಹಲಿ, . 04. ಇತ್ತೀಚೆಗೆ ಹೆಸರು ಬದಲಾಯಿಸಿದ ಟ್ವಟರ್, ಪ್ರಸ್ತುತ ಎಲಾನ್‌ ಮಸ್ಕ್ ಒಡೆತನದ ಎಕ್ಸ್‌ ಕಂಪನಿಯು ತನ್ನ ಗ್ರಾಹಕರಿಗೆ ವಿಡಿಯೋ ಕ್ಲಿಪ್‌ಗಳನ್ನು ಡೌನ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಿದೆ ಎಮದು ವರದಿ ತಿಳಿಸಿದೆ.

ಎಲಾನ್‌ ಮಸ್ಕ್ ಒಡೆತನದ ಕಂಪನಿಯು ಇತ್ತೀಚೆಗಷ್ಟೇ ತನ್ನ ಲೋಗೋ ಬದಲಿಸಿ ಹೊಸ ಲೋಗೋ “ಎಕ್ಸ್‌” ಪರಿಚಯಿಸಿತ್ತು. ಇದೀಗ ಎಕ್ಸ್‌ ತನ್ನ ಗ್ರಾಹಕರಿಗೆ, ವಿಡಿಯೋ ಕ್ಲಿಪ್‌ಗಳನ್ನು ಡೌನ್‌ಲೋಡ್‌ ಮಾಡಲು ಅವಕಾಶ ನೀಡಿದೆ. ಆದರೆ, ವಿಡಿಯೋವನ್ನು ಅಪ್‌ಲೋಡ್‌ ಮಾಡಿರುವ ಕ್ರಿಯೇಟರ್‌, ಇದಕ್ಕೆ ಅವಕಾಶ ನೀಡಿದರೆ ಮಾತ್ರ ಡೌನ್‌ ಲೋಡ್‌ ಸಾಧ್ಯ ಎಂದು ಹೇಳಲಾಗಿದೆ. ಈ ಸೌಲಭ್ಯವು ದೃಢೀಕೃತ ಖಾತೆ ಇರುವವರಿಗೆ ಎಕ್ಸ್‌ ಬ್ಲೂ ಸಬ್‌ ಸ್ಕ್ರೈಬ್‌ ಹೊಂದಿರುವ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಎಲಾನ್‌ ಮಸ್ಕ್ ತಿಳಿಸಿರುವುದಾಗಿ ವರದಿಯಾಗಿದೆ.

Also Read  ಆಗಸ್ಟ್‌ 15 ರಂದು ಕೊರೋನಾ ಸೋಂಕಿನಿಂದ ಸ್ವಾತಂತ್ಯ್ರ ಪಡೆಯುವ ಸಂಕಲ್ಪ ಮಾಡೋಣ ➤ ಪ್ರಧಾನಿ ನರೇಂದ್ರ ಮೋದಿ

error: Content is protected !!
Scroll to Top