ಕಡಬ ತಾಲೂಕು ಆಡಳಿತ ವತಿಯಿಂದ  ಸ್ವಾತಂತ್ರೊತ್ಸವ ಆಚರಣೆ ಹಿನ್ನೆಲೆ – ತಹಸೀಲ್ದಾರ್ ಕಛೇರಿಯಲ್ಲಿ ಪೂರ್ವಭಾವಿ ಸಭೆ

(ನ್ಯೂಸ್ ಕಡಬ)newskadaba.com ಕಡಬ, ಆ.03. ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ನೇತೃತ್ವದಲ್ಲಿ ೭೬ ನೇ ಸ್ವಾತಂತ್ರೋತ್ಸವವನ್ನು   ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಚರಿಸುವ ನಿಟ್ಟಿನಲ್ಲಿ ತಹಸೀಲ್ದಾರ್ ರಮೇಶ್ ಬಾಬು  ಅಧ್ಯಕ್ಷತೆಯಲ್ಲಿ ಕಡಬದ ಮಿನಿ ವಿಧಾನಸೌಧ  ಸಭಾಂಗಣದಲ್ಲಿ ಮಂಗಳವಾರ  ಪೂರ್ವಭಾವಿ ಸಭೆ  ನಡೆಯಿತು.

ಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಸ ಅಧ್ಯಕ್ಷತೆವಹಿಸಲಿದ್ದು   ಈಗ ತಾ.ಪಂ, ಪಟ್ಟಣ ಪಂಚಾಯಿತಿ, ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತ ಮಂಡಳಿ ಅಸ್ಥಿತ್ವ ಇಲ್ಲದ ಕಾರಣ ಕಡಬ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೀತಾ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.  ಬೆಳಿಗ್ಗೆ ೯.೦೦ ಗಂಟೆಗೆ ಪೊಲೀಸರ ಗೌರವ ವಂದನೆಯೊಂದಿಗೆ ಧ್ವಜಾರೋಹಣ ನಡೆಯಲಿದೆ . ಸಭಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮೆರವಣಿಗೆ ನಡೆಯಲಿದೆ.

ಸಭಾ ಕಾರ್ಯಕ್ರಮವನ್ನು   ಕಡಬ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆಸುವ ಬಗ್ಗೆ ಪ್ರಸ್ತಾಪ ಬಂದಾಗ ಶಾಲೆಯಲ್ಲಿನ ವೇದಿಕೆ ಸಮರ್ಪಕವಾಗಿಲ್ಲ, ಕಾರ್ಯಕ್ರಮಕ್ಕೆ ಸೂಕ್ತವಾಗಿಲ್ಲ ಎಂದು ಶಾಲಾ ಮುಖ್ಯಗುರು ಅನಂದ ಅಜಿಲ  ಹೇಳಿದರು. ಬಳಿಕ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜು ನಲ್ಲಿ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಎರಡೂ  ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸ್ಥಳ ನಿರ್ದಾರ ಕೈಗೊಳ್ಳುವ ನಿರ್ಣಯಿಸಲಾಯಿತು. ತಾಲೂಕಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು, ಸಾಹಿತ್ಯ, ಕ್ರೀಡೆ ಮುಂತಾದ ಕ್ಷೇತ್ರದಲಿ ಸಾಧನೆಗೈದವರನ್ನು ಸನ್ಮಾನಿಸಲಾಗುವುದು ಎನ್ನುವ  ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

Also Read  ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವ ಗೂಬೆ ಜಾಗೃತಿ ದಿನಾಚರಣೆ ➤ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಸಭೆಯಲ್ಲಿ ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಕೀರ ಮೂಲ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಪ್ರಮೀಳಾ ಜನಾರ್ದನ, ಪಿ ಪಿ ವರ್ಗಿಸ್, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್, ಕಡಬ ತಾಲೂಕು ಕನ್ನಡ ಸಾಹಿತ್ಯಪರಿಷತ್ ನಿಕಟಪೂರ್ವಾಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಶಿಕ್ಷಣ ಇಲಾಖಾ ಕಡಬ ಹಾಗು ನೂಜಿಬಾಳ್ತಿಲ ಕಸ್ಟರ್ ಸಿ ಆರ್ ಪಿ ಗೋವಿಂದ ರಾಜು, ಕಡಬ ತಾಲೂಕು ಸೈನಿಕ ಸಂಘದ ಸ್ಥಾಪಕಾಧ್ಯಕ್ಷ  ಮ್ಯಾಥ್ಯೂ ಟಿ ಜಿ ಮತ್ತಿತರರು ಸಲಹೆ ಸೂಚನೆ ನೀಡಿದರು.   ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್ , ಪ್ರಥಮ ದರ್ಜೆ ಸಹಾಯಕಿ ಭಾರತಿ ಉಪಸ್ಥಿತರಿದ್ದರು. ಕಡಬ ಉಪತಹಸೀಲ್ದಾರ್ ಮನೋಹರ ಕೆ.ಟಿ ಸ್ವಾಗತಿಸಿ ವಂದಿಸಿದರು.

Also Read  ಕುಂದಾಪುರ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರ ಬಂಧನ ಓರ್ವ ಎಸ್ಕೇಪ್

 

error: Content is protected !!
Scroll to Top