ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರು ಇದನ್ನು ಧರಿಸಿದಲ್ಲಿ ಆರಾಮ ಖಚಿತ -ಸ್ಯಾನಿಟರಿ ಪ್ಯಾಡ್ ಬಿಡ್ಬಿಡಿ…. ಇದನ್ನು👇🏻 ಬಳಸಿ

(ನ್ಯೂಸ್ ಕಡಬ) newskadaba.com ಆ. 03. ಮಹಿಳೆಯರಲ್ಲಿ ಋತುಸ್ತಾವ ಎಂಬುವುದು ನೈಸರ್ಗಿಕ ಕ್ರಿಯೆಯಾಗಿದ್ದು, ಕೆಲವರಿಗಂತೂ ಅತಿ ತ್ರಾಸದಾಯಕ ನೋವು ಉಂಟಾಗುತ್ತದೆ. ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡಾ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುತ್ತದೆ. ಬಹಳ ಹಿಂದಿನ ಕಾಲದಲ್ಲಿ ಋತುಮತಿಯಾದ ಸಂದರ್ಭ ಬಟ್ಟೆ ಬಳಸುತ್ತಿದ್ದುದು ಎಲ್ಲರಿಗೂ ತಿಳಿದಿರುವಂತಹ ಸಾಮಾನ್ಯ ವಿಚಾರ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸಲಾಗುತ್ತದೆ.

 


ಕೆಲವು ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಅತೀವ ರಕ್ತಸ್ರಾವವಾಗುವ ಮತ್ತು ರಕ್ತ ಹೆಪ್ಪಗಟ್ಟುವಿಕೆ ಕಂಡುಬಂದರೆ, ಮತ್ತೆ ಕೆಲವರಿಗೆ ತೀವ್ರ ಮೈಕೈ ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ರಕ್ತ ಸ್ರಾವವಾಗುವ ಜೊತೆಗೆ ಸ್ಯಾನಿಟರಿ ಪ್ಯಾಡ್ ಬಳಸಿದರೂ ಕೂಡಾ ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ಋತುಚಕ್ರದ ಸಮಯದಲ್ಲಿ ನೈರ್ಮಲ್ಯವು ಒಂದಾಗಿದ್ದು, ಹೀಗಿದ್ದಾಗ ಮುಟ್ಟಿನ ದಿನಗಳಲ್ಲಿ ಸಂಪೂರ್ಣ ಸ್ವಚ್ಛವಾಗಿರಲು ಸರಿಯಾದ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಈಗಾಗಲೇ ಮಹಿಳೆಯರಿಗೆ ನೆರವಾಗಲು, ಮೆನ್ಸಸ್ ಸಮಯದಲ್ಲಿ ಬಳಸಲು ಹಲವಾರು ಬಗೆಯ ಉತ್ಪನ್ನಗಳನ್ನು ಹೊರತರಲಾಗುತ್ತಿದ್ದು, ಅದರಲ್ಲೂ ಪೀರಿಯೆಡ್ಸ್ ಪ್ಯಾಂಟಿಗಳು ಒಂದು. ಹೆಚ್ಚಿನ ಮಹಿಳೆಯರು ಪೀರಿಯೆಡ್ಸ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಮುಟ್ಟಿನ ಕಪ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಇವೆಲ್ಲಕ್ಕಿಂತಲೂ ಪೀರಿಯೆಡ್ಸ್ ಸಮಯದಲ್ಲಿ ಬಳಸಬಹುದಾದ ಹೊಸ ಉತ್ಪನ್ನ ಹೆಚ್ಚು ಪ್ರಯೋಜನಕಾರಿಯಾಗಿದೆ.

Also Read  ನಿಮ್ಮ ಬೊಜ್ಜು ದೇಹಕ್ಕೆ ಕಾರಣವಾಗುತ್ತವೆ ಈ ಆಹಾರಗಳು!

ಸಾಮಾನ್ಯ ಒಳ ಉಡುಪುಗಳಂತೆ ಇದ್ದು, ಪೀರಿಯೆಡ್ಸ್ ಸಮಯದಲ್ಲಿ ರಕ್ತವನ್ನು ಸರಿಯಾಗಿ ಹೀರಿಕೊಳ್ಳಲು ಸಹಕಾರಿಯಾಗಿದ್ದು, ಈ ಪ್ಯಾಂಟಿಗಳು ಸ್ಯಾನಿಟರಿ ಪ್ಯಾಡ್‌ನಂತೆ ಕಾರ್ಯನಿರ್ವಹಿಸುತ್ತವೆ. ಎರಡು ಟ್ಯಾಂಪೂನ್‌ಗಳಿಗೆ ಸಮಾನವಾದ ರಕ್ತವನ್ನು ಹಿಡಿದಿಡುವಂತೆ ಇದನ್ನು ತಯಾರಿಸಲಾಗಿದ್ದು, ಅವುಗಳನ್ನು ತೊಳೆದು ಮರುಬಳಕೆ ಕೂಡ ಮಾಡಬಹುದಾಗಿದೆ.

ತುಂಬಾ ರಕ್ತಸ್ರಾವ ಇರುವವರು, ಅನಿಯಮಿತ ಮುಟ್ಟಿನ ಸಮಸ್ಯೆ, ರಕ್ತಸ್ರಾವ ಸರಿಯಾಗಿ ಆಗದಿದ್ದಾಗ, ಪೀರಿಯಡ್ ನ ಸಮಯ ಹತ್ತಿರವಾಗಿದೆ ಎಂಬ ಅನುಮಾನವಿದ್ದಾಗ ಬಳಸಬಹುದು. ಇದನ್ನು ಧರಿಸಿದರೆ ಯಾವುದೇ ಕಲೆ ಬಟ್ಟೆಗೆ ಆಗುವುದಿಲ್ಲ. ಇದರ ಮುಖ್ಯ ಉದ್ದೇಶ ರಕ್ತವನ್ನು ಹೀರಿಕೊಂಡು, ಲೀಕ್‌ ಆಗದಂತೆ ತಡೆಗಟ್ಟಿ, ಒದ್ದೆಯ ಅನುಭವವೂ ಆಗದಂತೆ ತಡೆಗಟ್ಟುತ್ತದೆ.

ಈ ಪ್ಯಾಂಟಿಗಳು ಉತ್ತಮ ಹೀರಿಕೊಳ್ಳುವಿಕೆಗಾಗಿ ಮೂರು ಪದರಗಳನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಅವಧಿಯ ಪ್ಯಾಂಟಿಯು ಮುಟ್ಟಿನ ರಕ್ತವನ್ನು ಹೀರಿಕೊಳ್ಳುತ್ತದೆ. ಯೋನಿ ಡಿಸ್ಚಾರ್ಜ್, ಬೆವರು, ಮುಟ್ಟಿನ ರಕ್ತ ಮತ್ತು ಸಣ್ಣ ಮೂತ್ರದ ಸೋರಿಕೆಯ ರೂಪದಲ್ಲಿ ತೇವಾಂಶವು ಆವಿಯಾಗುತ್ತದೆ. ಸ್ಯಾನಿಟರಿ ಪ್ಯಾಡ್ ಗಳಿಗೆ ಹೋಲಿಸಿದರೆ ಅವಧಿಯ ಪ್ಯಾಂಟಿಗಳು ಹಗುರವಾಗಿದೆ. ಸ್ಯಾನಿಟರಿ ಪ್ಯಾಡ್ ನ್ನು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಬಳಸುವುದು ಒಳ್ಳೆಯದಲ್ಲ. ಆದರೆ ಅವಧಿಯ ಪ್ಯಾಂಟಿಯನ್ನು ಎಷ್ಟು ಸಮಯ ಬೇಕಾದರೂ ಧರಿಸಬಹುದು. ಆದರೆ, ದೂರ ಪ್ರಯಾಣ ಮಾಡುವಾಗ ಇಲ್ಲವೇ ಅಧಿಕ ರಕ್ತಸ್ರಾವ ಕಾಣಿಸಿಕೊಂಡರೆ ಬದಲಿಸಲು ಬೇರೆ ವ್ಯವಸ್ಥೆ ಇಲ್ಲದೇ ಹೋದಾಗ ವಾಸನೆ ಬರುವ ಸಾಧ್ಯತೆ ಇದೆ. ಇದೆಲ್ಲವನ್ನೂ ಹೊರತು ಪಡಿಸಿದರೆ, ಮುಟ್ಟಿನ ಸೆಳೆತಕ್ಕೆ ಪೀರಿಯಡ್ ಪ್ಯಾಂಟಿಯ ಬಳಕೆ ಸಹಕಾರಿಯಾಗಿದ್ದು, ಪರಿಸರ ಸ್ನೇಹಿ ಮತ್ತು ಮರುಬಳಕೆ ಮಾಡಬಹುದಾಗಿದೆ.

Also Read  ನೀವು ಇಷ್ಟಪಟ್ಟ ಹುಡುಗಿ ಜೊತೆಗೆ ವಿವಾಹ ಆಗಲು ಈ ಸಣ್ಣ ಕೆಲಸ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

error: Content is protected !!
Scroll to Top