ಚಾರ್ಜರ್ ಪಿನ್‌ ನಿಂದ ಶಾಕ್‌ ಹೊಡೆದು ಕಂದಮ್ಮ ಮೃತ್ಯು

(ನ್ಯೂಸ್ ಕಡಬ)newskadaba.com ಕಾರವಾರ, ಆ.02. ಮೊಬೈಲ್ ಚಾರ್ಜರ್‌ ನ್ನು ಬಾಯಿಗೆ ಹಾಕಿದಾಗ ಶಾಕ್ ಹೊಡೆದು 8 ತಿಂಗಳ ಮಗು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.


ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ದಂಪತಿಗಳ 8 ತಿಂಗಳ ಮಗು ಸಾನಿಧ್ಯ ಬಲಿಯಾದ ಕಂದಮ್ಮ ಎಂದು ತಿಳಿದುಬಂದಿದೆ. ಮೊಬೈಲ್ ಚಾರ್ಜ್ ಮಾಡಿದ ಬಳಿಕ ಪೋಷಕರು ಪ್ಲಗ್‌ ಅನ್ನು ಆಫ್ ಮಾಡದೇ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಮಗು ಆಟವಾಡುತ್ತಾ ಚಾರ್ಜರ್ ಪಿನ್ ಅನ್ನು ಬಾಯಿಗೆ ಹಾಕಿಕೊಂಡಿತ್ತು. ಇದರಿಂದಾಗಿ ಶಾಕ್ ಹೊಡೆದು ಮಗು ಮೃತಪಟ್ಟಿದ್ದು, ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top