‘ವಿಟ್ಲದಲ್ಲಿ ನಡೆದ ಅತ್ಯಾಚಾರವನ್ನು ಮಂಗಳೂರು ಫೈಲ್ಸ್ ಎಂದು ಕರೆಯಬಹುದೇ’ ? – ಸಚಿವ ದಿನೇಶ್ ಗುಂಡೂರಾವ್ ತಿರುಗೇಟು

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.02. ಉಡುಪಿ ಕಾಲೇಜಿನ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೇರಳ ಫೈಲ್ಸ್‌ ಸಿನಿಮಾ ಮಾದರಿಯ ಕೃತ್ಯ ಎಂದು ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಔಟ್ ಗೋಯಿಂಗ್ ಅಧ್ಯಕ್ಷ/ವಿದೂಷಕ ಕಟೀಲ್ ಉಡುಪಿ ಪ್ರಕರಣವನ್ನು ಕೇರಳ ಫೈಲ್ಸ್ ಗೆ ಹೋಲಿಸಿದ್ದು, ಹಾಗಾದರೆ ಇವರದ್ದೇ ಕ್ಷೇತ್ರದ ವಿಟ್ಲದಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಸಂಘ ಪರಿವಾರಕ್ಕೆ ಸೇರಿದ 3 ಯುವಕರಿಂದ ನಡೆದಿರುವ ನಿರಂತರ ಅತ್ಯಾಚಾರ ಯಾವ ಫೈಲ್ಸ್ ? ಇದನ್ನು ಮಂಗಳೂರು ಫೈಲ್ಸ್ ಎಂದು ಕರೆಯಬಹುದೇ ? ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.


ಉಡುಪಿ ಪ್ರಕರಣವನ್ನು ರಾದ್ಧಾಂತ ಮಾಡಿದ ಬಿಜೆಪಿಯವರು, ವಿಟ್ಲದಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ ? ಆರೋಪಿಗಳು ಇವರ ಸಂಘಟನೆಗೆ ಸೇರಿದವರು ಎನ್ನುವ ಕಾರಣಕ್ಕಾಗಿ ಮೌನವೇ? ಬಿಜೆಪಿಯವರ ಪ್ರಕಾರ ಅಪರಾಧಿಗಳ ಧರ್ಮದ ಆಧಾರದ ಮೇಲೆ ಆ ಪ್ರಕರಣದ ತೀವ್ರತೆ ಮತ್ತು ಗುರುತ್ವ ನಿರ್ಧಾರವಾಗುತ್ತದೆಯೇ ? ಎಂದು ಕಿಡಿಕಾರಿದ್ದಾರೆ. ಕನಿಷ್ಠ ಪಕ್ಷ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಮೋದಿಯವರಿಗೆ ‘ರಾಜಧರ್ಮ’ ಪಾಲಿಸುವಂತೆ ಹೇಳಿದ್ದರು. ಈಗ ಮತ್ತೊಮ್ಮೆ ಮೋದಿಯವರಿಗೆ ರಾಜಧರ್ಮ ಪಾಲಿಸುವಂತೆ ಹೇಳಲು ಬಿಜೆಪಿಗಯಲ್ಲಿ ಯಾರಿಗೆ ತಾಕತ್ತಿದೆ? ಎಂದು ಟ್ವೀಟ್‌ ಮೇಲೆ ಟ್ವೀಟ್ ಹಾಕಿ ತಿರುಗೇಟು ನೀಡಿದ್ದಾರೆ.

error: Content is protected !!
Scroll to Top