ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆ ಹಣ ಬಿಡುಗಡೆ ಮಾಡಿದ ಸರ್ಕಾರ – ಮೊದಲ ಕಂತಿನಲ್ಲಿ 125.48 ಕೋಟಿ ರೂ ಬಿಡುಗಡೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.02. ಶಕ್ತಿ ಯೋಜನೆ ಅಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರಿ ಬಸ್ಗಳಲ್ಲಿ ವಿತರಿಸಲಾಗಿರುವ ಟಿಕೆಟ್ನ ಒಟ್ಟು ಮೊತ್ತದ ಮೊದಲ ಕಂತನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ನಾಲ್ಕೂ ನಿಗಮಗಳು ಒಟ್ಟಾಗಿ ವಿತರಿಸಿರುವ ಶೂನ್ಯ ಟಿಕೆಟ್‌ ದರ 6,87,49,57,753 ಈ ಮೊತ್ತದ ಒಂದು ಪಾಲನ್ನು ಅಥವಾ ಮೊದಲ ಕಂತನ್ನು ಸರ್ಕಾರ ಬಿಡುಗಡೆ ಮಾಡಿದೆ.


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) 47.15 ಕೋಟಿ ರೂ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 21.85 ಕೋಟಿ ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWRTC) 32.57 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ (KKRTC) 23.90 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಾಲ್ಕು ನಿಗಮಗಳಿಗೂ ಪ್ರತೇಕವಾಗಿ ಹಣ ಬಿಡುಗಡೆ ಮಾಡಲಾಗಿದೆ.

Also Read  ಇಂದು ಪುತ್ತೂರಿನ ನಾಲ್ವರಿಗೆ ಡೆಡ್ಲಿ ಕೊರೋನಾ ದೃಢ!


ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಜೂನ್. 11ರಂದು ಚಾಲನೆ ನೀಡಲಾಗಿತ್ತು. ಈವರೆಗೆ 4 ನಿಗಮಗಳಲ್ಲಿ 29,32,49,151 ಮಹಿಳೆಯರು ಪ್ರಯಾಣಿಸಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ನಾಲ್ಕು ನಿಗಮಗಳು ಒಟ್ಟು 6,87,49,57,753 ರೂ., ಮೌಲ್ಯದ ಶೂನ್ಯ ಟಿಕೆಟ್ ವಿತರಣೆ ಮಾಡಿವೆ ಎನ್ನಲಾಗಿದೆ.

 

error: Content is protected !!
Scroll to Top