‘ಖಾತೆ ಬ್ಲಾಕ್’ ಎಂಬ ಸಂದೇಶದ ಲಿಂಕ್ ಮೂಲಕ ಲಾಗಿನ್ – ವ್ಯಕ್ತಿಯ ಉಳಿತಾಯ ಖಾತೆಯಲ್ಲಿದ್ದ ಹಣ ಗುಳುಂ.!

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 31. ಬ್ಯಾಂಕ್ ಖಾತೆ ಬ್ಲಾಕ್ ಮಾಡಲಾಗಿದೆ ಎಂದು ಬಂದ ಲಿಂಕ್ ಮೂಲಕ ಇಂಟರ್‌ ನೆಟ್ ಬ್ಯಾಂಕಿಂಗ್ ಲಾಗಿನ್ ಆದ ವೇಳೆ ಉಳಿತಾಯ ಖಾತೆಯಲ್ಲಿದ್ದ 24,998 ರೂ. ಕಡಿತಗೊಂಡಿರುವ ಬಗ್ಗೆ ಉಪ್ಪಿನಂಗಡಿ ನಿವಾಸಿ ಮೋಹನ ಕುಮಾರ ಕೆ.ಎಸ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.


ಜು. 28ರಂದು ಸಂಜೆ 5 ಗಂಟೆಗೆ ಮೋಹನ ಕುಮಾರ ಅವರ ಮೊಬೈಲ್ ಪೋನ್‌ ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ನಿಮ್ಮ ಎಸ್‌ ಬಿಐ ಉಳಿತಾಯ ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂಭ ಲಿಂಕ್ ಬಂದಿದೆ. ಬಳಿಕ ಮೋಹನ ಕುಮಾರ್ ಅವರು ಆ ಲಿಂಕ್ ಮೂಲಕ ಇಂಟರ್ ನೆಟ್ ಬ್ಯಾಂಕಿಂಗ್‌ ಗೆ ಲಾಗಿನ್ ಆದ ಸಂದರ್ಭ ಅವರ ಉಳಿತಾಯ ಖಾತೆಯಲ್ಲಿದ್ದ 24,998 ರೂ. ಕಡಿತಗೊಂಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೋಹನ ಕುಮಾರ್ ಅವರು ನೀಡಿದ ದೂರಿನಂತೆ ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Also Read  ಶಾಸಕ ಅಂಗಾರರಿಗೆ ಸಚಿವ ಸ್ಥಾನ ನೀಡಬೇಕೆಂದು ಸುಳ್ಯದ ಮಹಿಳೆಯಿಂದ ಪ್ರಧಾನಿಗೆ ಪತ್ರ..!

error: Content is protected !!
Scroll to Top