ರಿಕ್ಷಾ ಚಾಲಕನಿಂದ ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ – ದೂರು ದಾಖಲು

(ನ್ಯೂಸ್ ಕಡಬ)newskadaba.com ಉಳ್ಳಾಲ, ಜು.29. ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ. ಆರೋಪಿಯು ಪರಾರಿಯಾಗಿದ್ದು, ಆರೋಪಿಯನ್ನು ಇಕ್ಬಾಲ್ ಎಂದು ಗುರುತಿಸಲಾಗಿದೆ.

ಬಸ್ಸಿಗಾಗಿ ಕಾಯುವ ವೇಳೆ ಮಾತನಾಡಿಸಲು ಯತ್ನಿಸಿದ್ದ ರಿಕ್ಷಾ ಚಾಲಕ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕುರಿತು ವಿದ್ಯಾರ್ಥಿನಿ ಹೆತ್ತವರಲ್ಲಿ ತಿಳಿಸಿದ್ದಳು ಎನ್ನಲಾಗಿದೆ.

 

 

Scroll to Top