ಇನ್ಮುಂದೆ ವಾರದಲ್ಲಿ 2 ದಿನ ಮಾತ್ರ ಡ್ರಿಂಕ್ & ಡ್ರೈವ್ ತಪಾಸಣೆ – ಪೊಲೀಸ್ ಇಲಾಖೆಯಿಂದ ಹೊಸಕ್ರಮ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಜು. 28. ಪೊಲೀಸ್ ಇಲಾಖೆ ಹೊಸ ಕ್ರಮ ಜಾರಿಗೆ ತಂದಿದ್ದು, ಇನ್ಮುಂದೆ ಮೇಲಾಧಿಕಾರಿಗಳು ಮಾತ್ರ ಡ್ರಿಂಕಕ್ & ಡ್ರೈವ್ ತಪಾಸಣೆ ನಡೆಸಬೇಕು ಎಂಬ ಮಹತ್ವದ ಮಾಹಿತಿ ಹೊರಬಿದ್ದಿದೆ.


ಇನ್ನು ಮುಂದೆ ಇನ್ಸ್ ಪೆಕ್ಟರ್ ಹಾಗೂ ಅವರ ಮೇಲಿನ ಅಧಿಕಾರಿಗಳು ಮಾತ್ರ ಡ್ರಿಂಕ್ & ಡ್ರೈವ್ ತಪಾಸಣೆ ಮಾಡಬೇಕು. ಈ ಬಗ್ಗೆ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಮೌಖಿಕವಾಗಿ ಸೂಚಿಸಿದ್ದಾರೆ.

ಇದರಿಂದಾಗಿ ಎಎಸ್‌ಐ ಹಾಗೂ ಕಾನ್ಸ್ ಟೇಬಲ್ ಹೆಸರಲ್ಲಿ ನಡೆಯುತ್ತಿದ್ದ ಸುಲಿಗೆ ನಿಲ್ಲಲಿದೆ ಎಂಬುದು ಇಲಾಖೆಯ ಅಭಿಮತ. ಅಲ್ಲದೇ ವಾರದಲ್ಲಿ 2 ದಿನ ಮಾತ್ರ ಡ್ರಂಕ್ & ಡ್ರೈವ್ ತಪಾಸಣೆ ಮಾಡುವಂತೆ ಸಂಚಾರಿ ಪೊಲೀಸರ ಸಭೆಯಲ್ಲಿ ಸೂಚಿಸಲಾಗಿದೆ.

Also Read  ಸುಳ್ಯ: ಬ್ರೇಕ್ ವೈಫಲ್ಯ ➤ಮನೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಲಾರಿ

error: Content is protected !!
Scroll to Top