(ನ್ಯೂಸ್ ಕಡಬ) newskadaba.com ಜು. 27. ಈ ಆಧುನಿಕ ಯುಗದಲ್ಲಿ ಪ್ರೆಶರ್ ಕುಕ್ಕರ್ ಇಲ್ಲದೇ ಅಡುಗೆ ಮನೆಯಲ್ಲಿ ಕೆಲಸ ಸಾಗುವುದೇ ಇಲ್ಲ. ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಸಮಯ ಉಳಿಯುತ್ತದೆ ನಿಜ. ಆದರೆ, ಕೆಲವೊಂದು ಆಹಾರಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದರೆ ಆಹಾರದ ರುಚಿ ಕಡಿಮೆಯಾಗುತ್ತದೆ. ಕುಕ್ಕರ್ ನಲ್ಲಿ ಪಿಸ್ಟ ಹೊಂದಿರುವ ಆಹಾರಗಳನ್ನು ಬೇಯಿಸಬಾರದು. ಅದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದು. ನೀವು ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಈ ಕೆಳಗಿನ ಆಹಾಗಳನ್ನು ಖಂಡಿತವಾಗಿಯೂ ಬಳಸಬೇಡಿ. ಅವುಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ..
ಅನ್ನ :
ನೀವು ಅನ್ನ ಬೇಯಿಸಲು ಪ್ರೆಶರ್ ಕುಕ್ಕರ್ ಬಳಸುತ್ತಿದ್ದರೆ, ಇಂದೇ ಆ ಕ್ರಮವನ್ನು ನಿಲ್ಲಿಸಿ ಬಿಡಿ. ಅಕ್ಕಿಯಲ್ಲಿರುವ ಪಿಷ್ಟವು ಅಕ್ರಿಲಮೈಡ್ ಎಂಬ ಹಾನಿಕಾರಕ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಇದು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ರಾಸಾಯನಿಕವನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್, ಬಂಜೆತನ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಂತಹ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಹಾಗಾಗಿ ಅನ್ನವನ್ನು ಕುಕ್ಕರ್ ನಲ್ಲಿ ಬೇಯಿಸುವ ಬದಲಾಗಿ ಸಾಮಾನ್ಯ ಪಾತ್ರೆಯಲ್ಲಿ ಬೇಯಿಸುವುದು ಉತ್ತಮ. ಇನ್ನು ಗಂಟು ನೋವು ಇದ್ದವರು ಕುಕ್ಕರ್ ಬದಲು ಸಾಮಾನ್ಯ ಪಾತ್ರೆಯಲ್ಲಿ ಅನ್ನವನ್ನು ಬೇಯಿಸಿ, ಅದರ ನೀರನ್ನು ಬಸಿದು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ ಎಂದು ಹೇಳಲಾಗುತ್ತದೆ.
ಆಲೂಗಡ್ಡೆ :
ಅನ್ನದ ಹಾಗೇ ಆಲೂಗಡ್ಡೆಯನ್ನು ಬೇಯಿಸಲು ಪ್ರೆಶರ್ ಕುಕ್ಕರ್ ಅನ್ನು ಬಳಸುತ್ತಾರೆ. ಆದರೆ ಅಕ್ಕಿಯಂತೆ, ಆಲೂಗಡ್ಡೆ ಕೂಡಾ ಹೆಚ್ಚಿನ ಪ್ರಮಾಣದ ಪಿಷ್ಟವನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಅವುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸುವುದು ಅಥವಾ ಬೇಯಿಸುವುದು ಸರಿಯಲ್ಲ.
ಪಾಸ್ತಾ :
ಪಾಸ್ಟಾದಲ್ಲಿ ಅಧಿಕ ಪ್ರಮಾಣದ ಪಿಷ್ಟ ಅಡಗಿದ್ದು, ಇದನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದರೆ ಅದು ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಪಾಸ್ತಾವನ್ನು ಬಾಣಲೆಯಲ್ಲಿ ಬೇಯಿಸಿ ಮಾಡುವುದೇ ಆರೋಗ್ಯಕರ ಮತ್ತು ರುಚಿಕರ ವಿಧಾನ. ಇನ್ನು ಪಾಸ್ತಾವನ್ನು ಕೂಡಾ ಯಾವುದೇ ಕಾರಣಕ್ಕೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು.
ಮೀನು :
ಮೀನು ತುಂಬಾ ಸೂಕ್ಷ್ಮವಾಗಿದ್ದು, ಮೀನನ್ನು ಕುಕ್ಕರ್ ನಲ್ಲಿಟ್ಟರೆ ಅದು ಮೀನಿನ ಘಮ ಕಳೆದುಕೊಳ್ಳುವುದರ ಜೊತೆಗೆ ರುಚಿಯಲ್ಲಿ ಕೂಡಾ ಒಣ ಮೀನಿನಂತೆ ಆಗಬಹುದು. ಕುಕ್ಕರ್‌ನಲ್ಲಿ ಬೇಯಿಸುವುದು ಖಂಡಿತಾ ತಪ್ಪು. ಆದ್ದರಿಂದ, ಆರೋಗ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ಮೇಲಿನ ಆಹಾರಗಳನ್ನು ಕುಕ್ಕರ್ ನಲ್ಲಿ ಬೇಯಿಸುವುದರಿಂದ ಸಾಮಾನ್ಯ ಪಾತ್ರೆಗಳಲ್ಲಿ ಬೇಯಿಸುವುದು ಉತ್ತಮ. ಇದರಿಂದ ಆರೋಗ್ಯಡ ಮೇಲೆ ಅಡ್ಡ ಪರಿಣಾಮ ಬೀರುವುದನ್ನು ತಪ್ಪಿಸಬಹುದು.