15 ವರ್ಷಗಳಿಂದ ಸಂಗ್ರಸಿಡಲಾದ ರಕ್ತ ಚಂದನಕ್ಕೆ ಕೊನೆಗೂ ಮುಕ್ತಿ..!

(ನ್ಯೂಸ್ ಕಡಬ) newskadaba.com  ಮಂಗಳೂರು, ಜು. 26. ಕಳೆ 15 ವರ್ಷಗಳಿಂದ ನವಮಂಗಳೂರು ಬಂದರಿನ ಯಾರ್ಡ್‌ನಲ್ಲಿ ಪೇರಿಸಿಡಲಾದ ರಕ್ತಚಂದನ ದಿಮ್ಮಿಗಳ ವಿಲೇವಾರಿಗೆ ಅರಣ್ಯ ಇಲಾಖೆ ನಿರ್ಧರಿಸಿದೆ. 2008 ರಿಂದ  ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಸ್ಟಮ್ಸ್ ಇಲಾಖೆ ಹಾಗೂ ಕಂದಾಯ ಗುಪ್ತಚರ ನಿರ್ದೇಶನಾಲಯ- ಡಿಆರ್‌ಐ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ಬಂದರಿನ ಯಾರ್ಡ್‌ನಲ್ಲಿ ಸಂಗ್ರಹಿಸಲಾಗಿದೆ.

ಸಂಗ್ರಹಿಸಿಡಲಾದ ಮರದ ದಿಮ್ಮಿಗಳನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಗ್ಲೋಬಲ್‌ ಟೆಂಡರ್‌ ಮೂಲಕ ವಿಲೇವಾರಿ ಮಾಡಬಹುದು. ಪೂರ್ವಭಾವಿ ಅನುಮೋದನೆ ಹಾಗೂ ಪತ್ರ ವ್ಯವಹಾರಗಳನ್ನು ಈಗಾಗಲೇ ಕಸ್ಟಮ್ಸ್ ನಡೆಸಿದ್ದು, ಇದನ್ನು ಮಾರುವ ಅಧಿಕಾರವನ್ನು ಅರಣ್ಯ ಇಲಾಖೆ ನಡೆಸಲಿದೆ. ಇದರಿಂದ ಬರುವ ಆದಾಯ ಕಸ್ಟಮ್ಸ್ ಇಲಾಖೆಗೆ ಸೇರಲಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಬರಬೇಕಿದೆ.

Also Read  ಮರ್ದಾಳ ಗಣೇಶ್ ಕೈಕುರೆಯವರ ಕೃಷಿ ಭೂಮಿಯಲ್ಲಿ ಬೆಥನಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಂದ "ಕಂಡೊಟೊಂಜಿ ದಿನ" ಕಾರ್ಯಕ್ರಮ

ಬಂದರಿನಲ್ಲಿ 58 ಟನ್‌ ರಕ್ತಚಂದನ ಇರುವ ಮಾಹಿತಿ ಲಭ್ಯವಾಗಿದ್ದು, ದಿಮ್ಮಿಗಳನ್ನು ಗುಣಮಟ್ಟಕ್ಕನುಸಾರ ಎ, ಬಿ ಮತ್ತು ಸಿ ಎಂದು ವಿಂಗಡಿಸಿ, ಬಳಿಕ ಅದರ ಮಾರಾಟ ಪ್ರಕ್ರಿಯೆ ನಡೆಯಲಿದೆ. ಬೇರೆ ವಸ್ತುಗಳ ರಫ್ತು ಹೆಸರಿನಲ್ಲಿ ಕಂಟೈನರ್‌ ಗಳಲ್ಲಿ ರಹಸ್ಯವಾಗಿ ಸಾಗಿಸುವ ಅನೇಕ ಪ್ರಕರಣಗಳು ಮಂಗಳೂರಿನಲ್ಲೂ ವರದಿಯಾಗಿದ್ದು, ಕಸ್ಟಂಸ್‌ ಹಾಗೂ ಡಿಆರ್‌ಐ ಇಲಾಖೆಗಳು ಇಂತಹ ಪ್ರಕರಣಗಳನ್ನು ತನಿಖೆ ಮಾಡುತ್ತವೆ. ಒಂದೆಡೆ ವಿಲೇವಾರಿ ಪ್ರಕ್ರಿಯೆ ನಡೆದರೆ ಇನ್ನೊಂದೆಡೆ ಆರೋಪಿಗಳ ನ್ಯಾಯಾಂಗ ವಿಚಾರಣೆ ನಡೆಯುತ್ತಿರುತ್ತದೆ ಎನ್ನಲಾಗಿದೆ.

error: Content is protected !!
Scroll to Top