ಸಾಲ ಮರುಪಾವತಿಗೆ ಹಣ ತೆಗೆದು ಬ್ಯಾಂಕ್ ಗೆ ಹಾಕದೇ ವಂಚನೆ

(ನ್ಯೂಸ್ ಕಡಬ) newskadaba.com ಮಲ್ಪೆ, ಜು. 26. ಫೈನಾನ್ಸ್ ಹಣದ ಲೋನ್ ಆಫೀಸರ್ ಬ್ಯಾಂಕಿಗೆ ಪಾವತಿಸದೇ ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತ್ ಪೈನಾನ್ಸ್ ಇನ್‌ಕ್ಲ್ಸೂಷನ್ ಲಿಮಿಟೆಡ್ ಶಾಖೆಯ ಕಿದಿಯೂರು ಶಾಖೆಯಲ್ಲಿ ಲೋನ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿಲೀಪ್ ಎಸ್.ಎಸ್ ಬಡ ಮಹಿಳೆಯರು ಸಂಘದಿಂದ ಸಾಲವಾಗಿ ಪಡೆದುಕೊಂಡ ಹಣಕ್ಕೆ ಇನ್ನು ಹೆಚ್ಚಿನ ಸಾಲ ಕೊಡಿಸುವುದಾಗಿ ನಂಬಿಸಿ ಮುಂಗಡವಾಗಿ ಸಾಲ ಮರುಪಾವತಿ ಮಾಡುವಂತೆ ತಿಳಿಸಿದ್ದನು.

2021ರ ನ. 27ರಿಂದ 2023ರ ಜೂ. 23ರವರೆಗೆ ದಿಲೀಪ್, ಸಂಘದ ಸದಸ್ಯರಿಂದ ಹಣವನ್ನು ವಸೂಲಾತಿ ಮಾಡಿದ್ದಲ್ಲದೇ ಅದನ್ನು ಬ್ಯಾಂಕಿಗೆ ಕಟ್ಟದೇ ತನ್ನ ಸ್ವಂತ ಲಾಭಕ್ಕೆ ಬಳಸಿಕೊಂಡು 11,88,878ರೂ. ಹಣವನ್ನು ದುರುಪಯೋಗ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

Also Read  ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಅನ್ಯಧರ್ಮದ ವ್ಯಕ್ತಿಗೆ ಹಲ್ಲೆ - ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

error: Content is protected !!
Scroll to Top