ತಮನ್ನಾಗೆ ಉಡುಗೊರೆಯಾಗಿ ಒಲಿದ 2 ಕೋಟಿ ರೂ. ಬೆಲೆಯ ಡೈಮಂಡ್‌ ರಿಂಗ್‌

(ನ್ಯೂಸ್ ಕಡಬ) newskadaba.com ಮುಂಬೈ, ಜು, 25. ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಜೀವನದ ಕಾರಣದಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ದಕ್ಷಿಣ ಭಾರತದಲ್ಲಿ ತನ್ನದೇ ಛಾಪು ಮೂಡಿಸಿರುವ ತಮನ್ನಾ ಸಖತ್​ ಬೇಡಿಕೆಯಿರುವ ನಟಿ. ತಮನ್ನಾ ನಟನೆಗೆ ಫಿದಾ ಆಗದ ಅಭಿಮಾನಿಗಳಿಲ್ಲ. ಸೆಲೆಬ್ರಿಟಿಗಳಿಗೂ ತಮನ್ನಾ ನಟನೆ ಇಷ್ಟ.

ಇದೀಗ ತಮನ್ನಾ ಭಾಟಿಯಾ ಬಳಿ 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವಿದ್ದು ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ವೈರಲ್​ ಆಗಿದೆ. ಇದರ ವಿಶೇಷತೆ ಏನೆಂದರೆ, ಜಗತ್ತಿನಲ್ಲೇ 5ನೇ ಅತಿ ದೊಡ್ಡ ವಜ್ರ ಎಂದು ಹೇಳಲಾಗುತ್ತಿದೆ. ಈ ಅತ್ಯಮೂಲ್ಯವಾದ ವಸ್ತು ತಮನ್ನಾಗೆ ರಾಮ್​ ಚರಣ್​ ಪತ್ನಿ ಉಪಾಸನಾ ಕೊನಿಡೆಲಾ ಅವರು ಗಿಫ್ಟ್​ ಆಗಿ ನೀಡಿದ್ದಾರೆ ಎನ್ನಲಾಗುತ್ತಿದೆ.

Also Read  ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ...!

ಉಪಾಸನಾ ಕೊನಿಡೆಲಾ ಅವರ ಜೊತೆ ತಮನ್ನಾ ಉತ್ತಮ ಬಾಂಧವ್ಯ ಹೊಂದದ್ದು, 2019ರಲ್ಲಿ ರಾಮ್​ ಚರಣ್​ ನಿರ್ಮಿಸಿದ್ದ ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸಿದ್ದರು.

error: Content is protected !!
Scroll to Top