ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಡಾಲ್ಫಿನ್ ಮೀನು ಹಿಡಿದು ತಿಂದ ಆರೋಪ- ಓರ್ವ ವಶಕ್ಕೆ – News Kadaba

ಡಾಲ್ಫಿನ್ ಮೀನು ಹಿಡಿದು ತಿಂದ ಆರೋಪ- ಓರ್ವ ವಶಕ್ಕೆ

crime, arrest, suspected

(ನ್ಯೂಸ್ ಕಡಬ) newskadaba.com ಕೌಶಂಬಿ, ಜು. 25. ಯಮುನಾ ನದಿಯಿಂದ ಅಕ್ರಮವಾಗಿ ಡಾಲ್ಫಿನ್​​ಮೀನನ್ನು ಹಿಡಿದು ತಿಂದ ಆರೋಪದಡಿ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಡಾಲ್ಫಿನ್ ಮೀನನ್ನು ಹಿಡಿದು ಹೊತ್ತೊಯ್ಯುತ್ತಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗಿದೆ.

ಈ ಕುರಿತು ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ಎಂಬವರು ನೀಡಿದ ದೂರಿನಂತೆ ರಂಜೀತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ನಾಲ್ವರು ಮೀನುಗಾರರು  ಜುಲೈ 22ರಂದು ನಸೀರ್‌ಪುರ ಗ್ರಾಮದ ಯಮುನಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ  ಡಾಲ್ಫಿನ್​​ ಮೀನು ಬಲೆಗೆ  ಬಿದ್ದಿದೆ. ಕೂಡಲೇ ಅವರು ಡಾಲ್ಫಿನ್​ ಮೀನನ್ನು ಹೊತ್ತೊಯ್ದು ಮನೆಗೆ ಸಾಗಿಸಿ ಮನೆಯಲ್ಲಿ ಅದನ್ನು ಬೇಯಿಸಿ ತಿಂದಿದ್ದಾರೆ ಎಂದು ಪೊಲೀಸ್​​​ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಮೀನುಗಾರರು ಡಾಲ್ಫಿನ್​​ನ್ನು ಮನೆಗೆ ಹೊತ್ತುಕೊಂಡು ಹೋಗುತ್ತಿದ್ದ ವೇಳೆ ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ರಂಜೀತ್  ಕುಮಾರ್ ಎಂಬಾತ​​ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Scroll to Top