(ನ್ಯೂಸ್ ಕಡಬ) newskadaba.com ನವದೆಹಲಿ, ಜು. 24. ಭಾರತೀಯ ರಿಸರ್ವ್ ಬ್ಯಾಂಕ್ ನ ರಜಾದಿನದ ಕ್ಯಾಲೆಂಡರ್ ಪ್ರಕಾರ, 2023ರ ಆಗಸ್ಟ್ ತಿಂಗಳಿನಲ್ಲಿ ವಾರಾಂತ್ಯ ಸೇರಿ ಒಟ್ಟು 14 ದಿನಗಳು ಬ್ಯಾಂಕ್ ರಜಾ ಇರಲಿದೆ.
ಆಗಸ್ಟ್ ತಿಂಗಳಿನಲ್ಲಿ ಒಟ್ಟ್ಉ 14 ದಿನಗಳ ಕಾಲ ಬ್ಯಾಂಕ್ ರಜಾ ಇರಲಿದ್ದು, ಸಾರ್ವಜನಿಕರು ಬ್ಯಾಂಕ್ ಕೆಲಸಗಳಿಗೆ ಭೇಟಿ ಕೊಡುವ ಮುನ್ನ ರಜಾ ದಿನಗಳ ಬಗ್ಗೆ ನೋಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಈಗಾಗಲೇ ಆರ್‌ಬಿಐ 2000 ರೂ.ಗಳ ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ವಿನಿಮಯ ಮಾಡಿಕೊಳ್ಳಲು ಹೇಳಿದೆ. ಈ ಹಿನ್ನಲೆ ಜನರು ತಮ್ಮ ಭೇಟಿಯನ್ನು ಸಮರ್ಪಕವಾಗಿ ಯೋಜಿಸಲು ಈ ಕೆಳಗಿನ ರಜಾದಿನಗಳನ್ನು ಪರಿಶೀಲಿಸಬಹುದು.
ಆಗಸ್ಟ್ ತಿಂಗಳ ರಜಾ ದಿನಗಳ ಪಟ್ಟಿ
ಆಗಸ್ಟ್ 6: ತಿಂಗಳ ಮೊದಲ ಭಾನುವಾರ
ಆಗಸ್ಟ್ 8: ಟೆಂಡೋಂಗ್ ಲ್ಹೋ ರಮ್ ಫಾತ್ (ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
ಆಗಸ್ಟ್ 12: ತಿಂಗಳ ಎರಡನೇ ಶನಿವಾರ
ಆಗಸ್ಟ್ 13: ತಿಂಗಳ ಎರಡನೇ ಭಾನುವಾರ
ಆಗಸ್ಟ್ 15: ಸ್ವಾತಂತ್ರ್ಯ ದಿನ
ಆಗಸ್ಟ್ 16: ಪಾರ್ಸಿ ಹೊಸ ವರ್ಷ (ಈ ಆಚರಣೆಗೆ ಬೇಲಾಪುರ್, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
ಆಗಸ್ಟ್ 18: ಶ್ರೀಮಂತ ಶಂಕರದೇವರ ತಿಥಿ (ಗುವಾಹಟಿಯಲ್ಲಿ ಬ್ಯಾಂಕ್ ರಜೆ)
ಆಗಸ್ಟ್ 20: ಮೂರನೇ ಭಾನುವಾರ
ಆಗಸ್ಟ್ 26: ತಿಂಗಳ ನಾಲ್ಕನೇ ಶನಿವಾರ
ಆಗಸ್ಟ್ 27: ತಿಂಗಳ ನಾಲ್ಕನೇ ಭಾನುವಾರ
ಆಗಸ್ಟ್ 28: ಮೊದಲ ಓಣಂ (ಕಾರಣ ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ರಜೆ ಇರಲಿವೆ)
ಆಗಸ್ಟ್ 29: ತಿರುವೋಣಂ (ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ)
ಆಗಸ್ಟ್ 30: ರಕ್ಷಾ ಬಂಧನ (ರಕ್ಷಾ ಬಂಧನದ ನಿಮಿತ್ತ ಜೈಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ರಜೆ ಇರಲಿವೆ)
ಆಗಸ್ಟ್ 31: ರಕ್ಷಾ ಬಂಧನ / ಶ್ರೀ ನಾರಾಯಣ ಗುರು ಜಯಂತಿ / ಪಾಂಗ್-ಲಬ್ಸೋಲ್ (ಗ್ಯಾಂಗ್‌ಟಾಕ್, ಡೆಹ್ರಾಡೂನ್, ಕಾನ್ಪುರ್, ಕೊಚ್ಚಿ, ಲಕ್ನೋ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ).