ಖಾಲಿ ಇರುವ VRW ಹುದ್ದೆಗಳಿಗೆ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ; ಆ. 16ರ ಒಳಗೆ ಅರ್ಜಿ ಸಲ್ಲಿಸಿ- ವಿವರ ಇಲ್ಲಿದೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 17. ತಾಲೂಕು ಶಿಶು ಅಭಿವೃದ್ಧಿ ಯೋಜನೆಯಡಿ ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‍ಗೆ ಒಬ್ಬರಂತೆ ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ವಿಕಲಚೇತನರಿಂದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ (ವಿ.ಅರ್.ಡಬ್ಲ್ಯೂ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 2023ರ ಆ.16ರೊಳಗೆ 18ರಿಂದ 45ವರ್ಷ ವಯೋಮಿತಿಯ ಅರ್ಹ ವಿಕಲಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ ಗೌರವಧನ (ವಿ.ಅರ್.ಡ್ಲ್ಯೂ) 9,000 ರೂ.ಗಳನ್ನು ನೀಡಲಾಗುತ್ತದೆ.

ಖಾಲಿ ಇರುವ ಹುದ್ದೆಗಳ ವಿವರ:

ಮಂಗಳೂರು ತಾಲೂಕು ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ (ವಿ.ಅರ್.ಡ್ಲ್ಯೂ) ಗ್ರಾಮ ಪಂಚಾಯತ್‍ಗಳಾದ ಕುಪ್ಪೆಪದವು, ಪಡುಪೆರಾರ, ಉಳಾಯಿಬೆಟ್ಟು ಹಾಗೂ ಮಲ್ಲೂರು.

ಉಳ್ಳಾಲ ತಾಲೂಕಿನ ಗ್ರಾಮ ಪಂಚಾಯತ್‍ಗಳಾದ, ಅಂಬ್ಲಮೊಗರು, ಬೊಳಿಯಾರ್, ಕೊಣಾಜೆ ಹಾಗೂ ಮುನ್ನೂರು.
ಮೂಡಬಿದಿರೆ ತಾಲೂಕಿನ ಗ್ರಾಮ ಪಂಚಾಯತ್‍ಗಳಾದ, ದರೆಗುಡ್ಡೆ, ಹೊಸಬೆಟ್ಟು, ಇರುವೈಲು, ಪಡುಮಾರ್ನಾಡು, ಪಾಲಡ್ಕ, ಪುತ್ತಿಗೆ ಹಾಗೂ ಶಿರ್ತಾಡಿ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, 1ನೇ ಮಹಡಿ ಜಿಲ್ಲಾ ಸ್ತ್ರೀಶಕ್ತಿ ಭವನ ಕಟ್ಟಡ, ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ ಬಳಿ, ಬಿಜೈ, ಮಂಗಳೂರು-575004 ಹಾಗೂ ದೂರವಾಣಿ ಸಂಖ್ಯೆ: 0824-2263199 ಅನ್ನು ಸಂಪರ್ಕಿಸುವಂತೆ ಮಂಗಳೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join the Group

Join WhatsApp Group