ಕನ್ನಡ ಕಿರುತೆರೆ ನಟಿಯರ ಬಿಕಿನಿ ಫೋಟೋಸ್ ವೈರಲ್ – ಹೆಚ್ಚುತ್ತಿರುವ ಬಿಕಿನಿ ಟ್ರೆಂಡ್

(ನ್ಯೂಸ್ ಕಡಬ) newskadaba.com  ಜು. 15. ಬಿಕಿನಿಗಳು ಮೊದಲು ಹಿಂದಿ ಸಿನೆಮಾಗಳಲ್ಲಿ ಬಳಕೆಯಾಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಅಲ್ಲದೇ ಕನ್ನಡ ಕಿರುತೆರೆಯ ನಟಿಯರಲ್ಲಿಯೂ ಬಿಕಿನಿ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.  ಸಾರಾ ಅಣ್ಣಯ್ಯ : ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕನ್ನಡತಿ’ ನಟಿ ಸಾರಾ ಅಣ್ಣಯ್ಯ, ಇದೀಗ ಬಿಕಿನಿ ಧರಿಸಿ ತನ್ನ ಪೋಟೋಗಳನ್ನು ಜಾಲತಾಣದಲ್ಲಿ ಶೇರ್‌ ಮಾಡಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.

ಹಾಗೆಯೇ ಇತ್ತೀಚೆಗೆ ಪುಟ್ಟಗೌರಿ ಮದುವೆ ಹಾಗೂ ನಾಗಿಣಿ- 2 ಸೀರಿಯಲ್‌ ನಟಿ ನಮ್ರತಾ ಗೌಡ ಬಿಕಿನಿ ಧರಿಸಿ ಹಾಟ್ ಫೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ. ನಾಗಿಣಿ 2 ಧಾರವಾಹಿಯಲ್ಲಿ ಮಾಯಾಂಗಣೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಐಶ್ವರ್ಯ ಸಿಂಧೊಗಿ ಚೆಲುವೆ ಇದೀಗ ಬಿಕಿನಿ ಧರಿಸಿ ಪೋಸ್‌ ಕೊಟ್ಟಿದ್ದಾರೆ. ಕನ್ನಡದ ಗೀತಾ ಸೀರಿಯಲ್‌ನಲ್ಲಿ ಭಾನುಮತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀಲಂಕಾ ಹಾಗೂ ವಿಯೆಟ್ನಾಂ ಪ್ರವಾಸಕ್ಕೆ ತೆರಳಿದಾಗ ಬಿಕಿನಿ ಧರಿಸಿ ಎಲ್ಲರ ಹೃದಯದಲ್ಲಿ ಚಲ್ ಎಬ್ಬಿಸಿದ್ದರು. ಕನ್ನಡ ಬಿಗ್‌ಬಾಸ್‌ ಓಟಿಟಿ 1ರ ಸ್ಪರ್ಧಿಯಾಗಿದ್ದ ಜಯಶ್ರೀ ಆರಾಧ್ಯಾ ಸದ್ಯ ಬೀಚ್‌ ವೆಕೇಷನ್‌ನಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಪಂಜರದ ಗಿಳಿ, ಚಂದ್ರ ಚಕೋರಿ ಮುಂತಾದ ಧಾರಾವಾಹಿಗಳ ಮೂಲಕ ಗಮನ ಸೆಳೆದಿದ್ದ ನಟಿ ಸಂಗೀತಾ ಭಟ್‌ ಸದ್ಯ ಬಿಕಿನಿ ಧರಿಸಿ ಸುದ್ದಿಯಲ್ಲಿದ್ದಾರೆ.

Also Read  ಶ್ರೀ ಕ್ಷೇತ್ರ ಕಬ್ಬಾಳಮ್ಮ ದೇವಾಲಯದ ಮಾಹಿತಿ

error: Content is protected !!
Scroll to Top