“ನನಗೆ ಹುಡುಗ ಬೇಕು.. ಹುಡುಕಿ ಕೊಟ್ಟವರಿಗೆ 4 ಲಕ್ಷ ರೂ. ಬಹುಮಾನ”- ಬಂಪರ್ ಆಫರ್ ಘೋಷಿಸಿದ ಮಹಿಳೆ

(ನ್ಯೂಸ್ ಕಡಬ) newskadaba.com ಅಮೆರಿಕಾ, ಜು. 15. ಹುಡುಗಿಯೋರ್ವಳು ತನಗೆ ಇಷ್ಟವಾದ ಗುಣಗಳಿರುವ ವ್ಯಕ್ತಿಯನ್ನು ಹುಡುಕಿಕೊಟ್ಟವರಿಗೆ ಲಕ್ಷ ರೂ.ಗಳ ಬಹುಮಾನ ನೀಡುವುದಾಗಿ ಭರ್ಜರಿ ಆಫರ್ ಘೋಷಿಸಿದ ಕುರಿತು ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಅಮೆರಿಕದ ಲಾಸ್ ಏಂಜಲೀಸ್‌ನ 35 ವರ್ಷದ ಸುಂದರಿ ಇದೀಗ ಮದುವೆಯಾಗಲು ಬಯಸಿದ್ದಾಳೆ. ತನ್ನ ಗಂಡನಾಗುವ ಪುರುಷನಿಗೆ ಯಾವ-ಯಾವ ಗುಣಗಳು ಇರಬೇಕು ಎಂಬುದನ್ನೂ ಹೇಳಿದ್ದಾಳೆ. ಅಲ್ಲದೇ ಅಂತಹ ವ್ಯಕ್ತಿಯನ್ನು ಪತ್ತೆ ಮಾಡಿ ಮಾಹಿತಿ ನೀಡಿದಲ್ಲಿ ಅಂಥವರಿಗೆ 5000 ಡಾಲರ್ ಬಹುಮಾನ ನೀಡುವುದಾಗಿಯೂ ಭರ್ಜರಿ ಆಫರ್ ಘೋಷಿಸಿದ್ದಾರೆ. ಇದು ಭಾರತೀಯ ಕರೆನ್ಸಿಯಲ್ಲಿ 4 ಲಕ್ಷ ರೂ.ಗಳಿಗಿಂತಲೂ ಹೆಚ್ಚು.

Also Read  ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ- ಚಂದ್ರಯಾನ-3ರ ಬಗ್ಗೆ ವ್ಯಂಗ್ಯವಾಡಿದ ಮಾಜಿ ಸಚಿವ

ಸದ್ಯ ಡೇಟಿಂಗ್ ಬಿಟ್ಟು ಒಂಟಿಯಾಗಿದ್ದು, ಒಂಟಿತನ ಬೇಸರ ತರಿಸುತ್ತಿದೆ. ಅದಕ್ಕಾಗಿಯೇ ಮದುವೆಯಾಗಲು ಬಯಸುತ್ತೇನೆ. ತಾನು ಹೇಳಿದ ಗುಣಲಕ್ಷಣಗಳಿರುವ ವ್ಯಕ್ತಿ ಸಿಕ್ಕರೆ 5 ಸಾವಿರ ಡಾಲರ್ ಕೊಡುವುದಾಗಿ ಹೇಳಿ, ಬಳಿಕ ಈ ಆಫರ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರಿಗೂ ತಿಳಿಸಿದ್ದಾಳೆ. ವರನಿಗೆ ಇರಬೇಕಾದ ಗುಣಗಳು: ವಯಸ್ಸು 27 ರಿಂದ 40 ವರ್ಷಗಳು. ಎತ್ತರ 5.11 ಅಡಿ ಅಥವಾ ಅದಕ್ಕಿಂತ ಹೆಚ್ಚು ಇರಬೇಕು. ಹಾಸ್ಯವೂ ಇರಬೇಕು. ಪ್ರಾಣಿಗಳಿಗೆ ಪ್ರೀತಿ ತೋರಿಸಬೇಕು. ಮಾನವ ಸಂಬಂಧಗಳ ಬಗ್ಗೆ ಜನರು ಗಂಭೀರವಾಗಿರಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಅವನು ಅವಿವಾಹಿತನಾಗಿರಬೇಕು. ಡ್ರಗ್ಸ್ ನಂತಹ ಚಟ ಬೇಡ ಎನ್ನುತ್ತಾರೆ.

Also Read  ಬೆಂಕಿ ಅವಘಡ… ➤ ಐವರು ಮಕ್ಕಳು ಮತ್ತು ಪೋಷಕರು ಮೃತ್ಯು

error: Content is protected !!
Scroll to Top