ಬಿಕಿನಿ ತೊಟ್ಟು ಮಿಂಚಿದ ನಾಗಿಣಿ-2 ಸೀರಿಯಲ್ ನ ನಮ್ರತಾ ಗೌಡ..!

(ನ್ಯೂಸ್ ಕಡಬ) newskadaba.com ಬೆಂಗಳೂರು,  ಜು. 12. ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಿರುತೆರೆ ನಟಿ ನಮೃತಾ ಗೌಡ ಜನರ ಮನಸ್ಸನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ನಂತರ ದಿನಗಳಲ್ಲಿ ಜೀ ಕನ್ನಡ ವಾಹಿನಿಯ ನಾಗಿಣಿ 2 ಧಾರಾವಾಹಿ ಮೂಲಕ ಇನ್ನಷ್ಟು ಪ್ರಶಂಸೆಗೆ ಪಾತ್ರರಾಗಿರುವ ನಟಿ ನಮ್ರತಾ ಗೌಡ ತನ್ನ ಅದ್ಭುತ ನಟನೆಯ ಮೂಲಕ ಕರುನಾಡ ಜನತೆಯ ಮನೆ ಮಗಳಾಗಿದ್ದಾರೆ.

ಇದೀಗ ನಮ್ರತಾ ಗೌಡ ಬಿಕಿನಿ ತೊಟ್ಟಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು, “ನನ್ನ ಜೀವನದ ಗಾಸಿಪ್‌ ಕಡೆ ನೋಡುವವರು, ಅದನ್ನು ಬಿಡಬೇಡಿ, ಸೀಸನ್‌ 2 ಬರಲಿದೆ” ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅಭಿಮಾನಿಗಳಿಗೆ ಈ ರೀತಿ ಸಾಲುಗಳನ್ನು ಯಾಕೆ ಹಂಚಿಕೊಂಡಿದ್ದಾರೆ ಎಂಬ ಕುತೂಹಲ ಮೂಡಿದೆ.

Also Read  ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

1993ರ ಏಪ್ರಿಲ್‌ 15 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನಟಿ ನಮ್ರತಾ ಗೌಡ, 2011ರಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಆಕಾಶ ದೀಪ, ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದ ಮೂಲಕ ಗಮನ ಸೆಳೆದರು. ಬಳಿಕ ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಧಾರಾವಾಹಿ ಮೂಲಕ ಕನ್ನಡ ಸಿನಿಪ್ರಿಯರ ಮನಸನ್ನು ಗೆದಿದ್ದಾರೆ. ನಂತರ ದಿನಗಳಲ್ಲಿ ತಕಮಿಧಿತ ಡ್ಯಾನ್ಸ್ ನಲ್ಲಿ ಭಾಗವಹಿಸಿ ಟಾಪ್ 5 ಗೆ ಆಯ್ಕೆಯಾಗಿದ್ದರು. ಸದ್ಯ ನಾಗಿಣಿ 2 ಧಾರವಾಹಿಯ ಬಳಿಕ ಯಾವುದೇ ಪ್ರಾಜೆಕ್ಟ್‌ ನಲ್ಲಿ ಕಾಣಿಸಿಕೊಳ್ಳದೇ ತಮ್ಮದೇ ಯೂಟ್ಯೂಬ್‌ ಚಾನೆಲ್‌ ಆರಂಭ ಮಾಡಿ ಅದರಲ್ಲಿ ಸಕ್ರಿಯರಾಗಿದ್ದಾರೆ.

Also Read  ಮದುವೆಗೆ ದೋಷಗಳು ನಿವಾರಣೆಯಾಗಬೇಕು ಎಂದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

error: Content is protected !!
Scroll to Top