ಕದಂಬ ಹಿತರಕ್ಷಣಾ ಸಂಘಟನೆಯಿಂದ ರಕ್ತದಾನ ಶಿಬಿರ ► 108 ಆಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಸನ್ಮಾನ

(ನ್ಯೂಸ್ ಕಡಬ) newskadaba ಕಡಬ, ಜ.27. ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆಯ 4ನೇ ವರ್ಷದ ಪಾದಾರ್ಪಣೆಯ ಪ್ರಯುಕ್ತ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಇಂಡಿಯನ್ ರೆಡ್‌ಕ್ರಾಸ್ ರಕ್ತ ನಿಧಿ ಸೊಸೈಟಿಯ ಸಹಯೋಗದಲ್ಲಿ ಶುಕ್ರವಾರದಂದು ಕಡಬದ ಬಾಬು ಮತ್ತು ಭಾಗೀರಥಿ ಟವರ್‍ಸ್‌ನ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ರಕ್ತವರ್ಗೀಕರಣ ಮತ್ತು ಮಧುಮೇಹ ಪರೀಕ್ಷೆ ನಡೆಯಿತು.

ಕಾರ್ಯಕ್ರಮವನ್ನು ದಯಾನಂದ ನಾಯ್ಕ್ ಮೇಲಿನಮನೆ ಹಾಗೂ ಮಹಾಬಲ ನಾಯ್ಕ್ ಮೇಲಿನಮನೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಂಗಳೂರು ಜಿಲ್ಲಾ ಲೇಡಿಗೋಶನ್ ಆಸ್ಪತ್ರೆಯ ಇಂಡಿಯನ್ ರೆಡ್ ಕ್ರಾಸ್ ರಕ್ತ ನಿಧಿ ಸೊಸೈಟಿ ವತಿಯಿಂದ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ರಕ್ತ ಒದಗಿಸುವುದಲ್ಲದೆ ಶಿಬಿರಗಳನ್ನು ನಡೆಸುವ ಮೂಲಕ ಉಚಿತ ಸೇವೆ ನೀಡುತ್ತಿರುವ ಡಾ.ಎಡ್ವರ್ಡ್ ವಾಸ್ ಹಾಗೂ ದಿನದ 24 ಗಂಟೆಗಳಲ್ಲೂ ಸೇವೆ ನೀಡುತ್ತಿರುವ ತುರ್ತು ಚಿಕಿತ್ಸಾ 108 ಆಂಬ್ಯುಲೆನ್ಸ್ ಸಿಬ್ಬಂದಿಗಳಾದ ಚಂದ್ರಶೇಖರ ಎನ್, ಸುಧೀರ್ ಕೆ.ಎಸ್, ಚಂದ್ರಶೇಖರ ಗೌಡ, ರಾಜೇಶ್ ಗೌಡರವರನ್ನು ಸನ್ಮಾನಿಸಿ ಗೌರವಿಸಲಾಯಿತು.

Also Read  ಉಪ್ಪಿನಂಗಡಿ: ಹಿಜಾಬ್ ವಿಚಾರದಲ್ಲಿ ವರದಿಗೆ ತೆರಳಿದ್ದ ಪತ್ರಕರ್ತನಿಗೆ ದಿಗ್ಬಂಧನ ಆರೋಪ ➤ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಡಬ ತಾಲೂಕು ಪತ್ರಕರ್ತರ ಸಂಘದಿಂದ ಮನವಿ

error: Content is protected !!
Scroll to Top