ಫ್ಲ್ಯಾಟ್‌ ನ ಕಿಟಕಿಯಲ್ಲಿ ಸಿಲುಕಿದ್ದ ವಿಶೇಷ ಚೇತನ ಬಾಲಕನ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ, ಜು. 10. ವಸತಿ ಸಮುಚ್ಚಯದ ಪ್ಲ್ಯಾಟ್ ನ ಕಿಟಕಿಯೊಂದರಲ್ಲಿ ವಿಶೇಷಚೇತನ ಬಾಲಕನೋರ್ವ ಸಿಲುಕಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ಇಂದು ನಡೆದಿದೆ.

ವಿಶೇಷಚೇತನನಾಗಿದ್ದ ಎಂಟು ವರ್ಷದ ಬಾಲಕ ಆರುಷ್ ಅಪಾರ್ಟ್ಮೆಂಟ್‌ ನ ಹನ್ನೊಂದನೇ ಮಹಡಿಯ ಬಾಲ್ಕನಿ ಮೂಲಕ ಹೊರ ಹೋಗಿ ಹತ್ತನೇ ಪ್ಲೋರ್‌ ನ ಕಿಟಕಿ ಫೋರಂ‌ನಲ್ಲಿ ಸಿಕ್ಕಿ ಅಪಾಯದಲ್ಲಿ ಸಿಲುಕಿದ್ದ. ಈ ಕುರಿತು ಮಾಹಿತಿ ದೊರೆತ ತಕ್ಷಣ ಸಕಾಲಕ್ಕೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ನಾಳೆ ವಿ.ವಿ ಶೈಕ್ಷಣಿಕ ಮಂಡಳಿ ಸಾಮಾನ್ಯ ಸಭೆ

error: Content is protected !!
Scroll to Top