ಸುಳ್ಯದ ಹಲವೆಡೆ ಮತ್ತೆ ಭೂಕಂಪನ

(ನ್ಯೂಸ್ ಕಡಬ) newskadaba.com ಮಡಿಕೇರಿ, ಜು. 11. ಕೊಡಗಿನ ಗಡಿಯಲ್ಲಿ ಇಂದು ಸಂಜೆ 4 ಗಂಟೆಯ ಹೊತ್ತಿಗೆ ಮತ್ತೆ ಭೂಮಿ ಕಂಪಿಸಿರುವುದಾಗಿ ವರದಿಯಾಗಿದೆ.

ಪೆರಾಜೆ, ಅರಂತೋಡು, ಮರ್ಕಂಜ, ಪೆರಾಜೆ, ಚೆಂಬು, ತೊಡಿಕಾನ, ಉಬರಡ್ಕ ಮತ್ತಿತರ ಪ್ರದೇಶಗಳಲ್ಲಿ ಕಂಪನ ಆಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕೆಲವವೆಡೆ ಲಘು ಕಂಪನ ಅನುಭವವಾಗಿದ್ದು, ಅನೇಕ ಕಡೆ ದೊಡ್ಡ ಶಬ್ದದ ಅರಿವಾಗಿದೆ ಎನ್ನಲಾಗಿದೆ. ನಿನ್ನೆ ಕೂಡಾ ಇದೇ ಭಾಗದಲ್ಲಿ 1.8 ತೀವ್ರತೆಯ ಲಘು ಕಂಪನವಾಗಿತ್ತು ಎಂದು ತಿಳಿದು ಬಂದಿದೆ.

Scroll to Top