(ನ್ಯೂಸ್ ಕಡಬ)newskadaba. ನವದೆಹಲಿ, ಜು. 4. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 7 ರೂ.ಗಳಷ್ಟು ಹೆಚ್ಚಿಸಲಾಗಿದೆ.

ಜೂನ್ ತಿಂಗಳ ಸಿಲಿಂಡರ್ ಬೆಲೆಗಳನ್ನು 83.5 ರೂ.ಗಳಷ್ಟು ಕಡಿತಗೊಳಿಸಿ ನಂತರ ಜುಲೈನಲ್ಲಿ ಕೊಂಚ ಏರಿಕೆ ಕಂಡಿದೆ ಇನ್ನು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 7 ರೂ.ಗಳಷ್ಟು ಏರಿಕೆಯಾಗಿದ್ದು, ಇದು ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 1,773 ರೂ.ಗಳಿಂದ 1,780 ರೂ.ಗೆ ಹೆಚ್ಚಿಸಲಾಗಿದೆ.
