ಕಡಬ: ಯುವತಿ ನಾಪತ್ತೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಜೂ. 24. ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಆಕೆಯ ಸಹೋದರ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.

 

ನಾಪತ್ತೆಯಾದವರನ್ನು ಹಾಸನ ಜಿಲ್ಲೆ ಬೇಲೂರು ತಾಲೂಕು ಹಗರೆ ಅಂಗಡಿಹಳ್ಳಿ ನಿವಾಸಿ ಪ್ರಸ್ತುತ ಕಡಬ ತಾಲೂಕಿನ ಕಡಬ ಗ್ರಾಮದ ಕಳಾರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ರಕ್ಷಿತಾ (18) ಎಂದು ಗುರುತಿಸಲಾಗಿದೆ. ಕಳೆದ 6 ವರ್ಷಗಳಿಂದ ಕಡಬದ ಕಳಾರದ ಇಸ್ಮಾಯಿಲ್ ಎಂಬವರ ಬಾಡಿಗೆ ಮನೆಯಲ್ಲಿ ತಂದೆ, ತಾಯಿ ಅಕ್ಕ, ತಂಗಿಯೊಂದಿಗೆ ವಾಸವಾಗಿದ್ದ ಈಕೆ, 10ನೇ ತರಗತಿ ವಿದ್ಯಾಬ್ಯಾಸ ಮಾಡಿ ಬಳಿಕ 3 ವರ್ಷದಿಂದ ಮನೆಯಲ್ಲಿಯೇ ಮನೆ ಕೆಲಸ ಮಾಡಿಕೊಂಡಿರುತ್ತಿದ್ದಳು. ಜೂ.20ರಂದು ಬೆಳಗ್ಗೆ 12 ಗಂಟೆಗೆ ಮನೆಯಿಂದ ಹೋದವಳು ಇದುವರೆಗೆ ಮನೆಗೆ ಬಾರದೇ, ಬೇಲೂರು ತಾಲೂಕಿನ ಹಗರೆ ಎಂಬಲ್ಲಿಗೂ ಹೋಗದೆ ನಾಪತ್ತೆಯಾಗಿದ್ದಾಳೆ. ರಕ್ಷಿತಾ ಸಂಬಂಧಿಕ ರವಿ ಎಂಬಾತನನ್ನು ಪ್ರೀತಿಸುತ್ತಿದ್ದು, ಸದ್ಯ ಆತನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಯಾವುದೇ ಮಾಹಿತಿ ಪತ್ತೆ ಸಾಧ್ಯವಾಗಿಲ್ಲ ಎಂದು ಸಹೋದರ ಸುನಿಲ್ ದೂರಿನಲ್ಲಿ ತಿಳಿಸಿದ್ದಾರೆ.

Scroll to Top