ಕೇರಳದ 13 ಯೂಟ್ಯೂಬರ್ಸ್ ಗಳ ಮನೆಮೇಲೆ ಐಟಿ ದಾಳಿ ➤ 25 ಕೋಟಿ ರೂ. ತೆರಿಗೆ ವಂಚನೆ

(ನ್ಯೂಸ್ ಕಡಬ) newskadaba.com ಕೊಚ್ಚಿ, ಜೂ. 24.  ಕೇರಳದ ಕೆಲ ಯೂಟ್ಯೂಬರ್ಸ್​ ಮನೆಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಇದೀಗ ತೆರಿಗೆ ವಂಚನೆ ಆರೋಪದಡಿಯಲ್ಲಿ ಕೆಲ ಯೂಟ್ಯೂಬರ್ಸ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ದಾಳಿಯ ವೇಳೆ ಸುಮಾರು 25 ಕೋಟಿ ರೂ. ತೆರಿಗೆಯನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಕೆಲವರು 2 ಕೋಟಿ ರೂಪಾಯಿವರೆಗೂ ತೆರಿಗೆ ಕಟ್ಟಬೇಕಿದ್ದು, ಆದಾಗ್ಯೂ ಕೆಲವರು ಈವರೆಗೂ ಒಂದೇ ಒಂದು ರೂಪಾಯಿ ತೆರಿಗೆ ಹಣ ಕಟ್ಟಿಲ್ಲ ಎಂದು ಐಟಿ ಇಲಾಖೆ ಸ್ಪಷ್ಟಪಡಿಸಿದೆ. ಈ ಬಗ್ಗೆ ವಿಚಾರಿಸಿದಾಗ ಹಲವು ಯೂಟ್ಯೂಬರ್ಸ್​ ತೆರಿಗೆ ಕಟ್ಟಬೇಕು ಎಂಬುದು ನಮಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದುವರೆಗೆ ಒಟ್ಟು 13 ಯೂಟ್ಯೂಬರ್ಸ್​ ಮನೆ ಮತ್ತು ಕಚೇರಿಗಳಿಗೆ ದಾಳಿ ನಡೆಸಿದ ಐಟಿ ಇಲಾಖೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಯೂಟ್ಯೂಬರ್ಸ್​ ಮನೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ.

Also Read  ಕಾಡುಹಂದಿ ದಾಳಿ ➤‌ ತಂದೆ- ಮಗ ಗಂಭೀರ

error: Content is protected !!
Scroll to Top