ಮಂಗಳೂರು: ಬಾಡಿಗೆಗೆ ಕಾರನ್ನು ಪಡೆದು ಮಾರಾಟ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 24. ನಗರದ ಫಳ್ನೀ ರ್ ನಲ್ಲಿರುವ ಸಂಸ್ಥೆಯೊಂದರಿಂದ ಬಾಡಿಗೆ ಕಾರು ಪಡೆದು ಅದನ್ನು ಮಾರಾಟ ಮಾಡಿದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳದ ಯಕ್ಷಿತ್ ಎಂಬಾತ ಕಾರೊಂದನ್ನು ಆನ್‌ ಲೈನ್ ಮೂಲಕ ಬುಕ್ ಮಾಡಿ 25 ಸಾವಿರ ರೂ. ಆನ್ಲೈನ್ ಮೂಲಕ ಪಾವತಿಸಿ, ಬಾಕಿ ಇರುವ 50 ಸಾವಿರ ರೂ. ಹಣವನ್ನು ನಗದು ರೂಪದಲ್ಲಿ ನೀಡಿ, ಅದರೊಂದಿಗೆ ಆಧಾರ್ ಕಾರ್ಡ್, ಲೈಸೆನ್ಸ್ ಮತ್ತು 3 ಬ್ಯಾಂಕ್ ಚೆಕ್‌ ನ್ನು ನೀಡಿ 15 ದಿನಗಳಿಗೆ ಬಾಡಿಗೆಗೆ ತೆಗೆದುಕೊಂಡು ಹೋಗಿದ್ದರು. ನಂತರ ಬುಕ್ಕಿಂಗ್ ಅವಧಿ ಮುಗಿದಿದ್ದರೂ ಕಾರನ್ನು ಹಿಂತಿರುಗಿಸದೇ ಇರುವುದರಿಂದ ಸಂಸ್ಥೆಯ ಮಾಲಕ ಹುಸೈನಾರ್ ರವರು ಕರೆ ಮಾಡಿದಾಗ ಕರೆಗೆ ಸ್ಪಂದಿಸಿಲ್ಲ ಎನ್ನಲಾಗಿದೆ. ಜಿಪಿಎಸ್ ಮೂಲಕ ಪರಿಶೀಲನೆ ನಡೆಸಿದಾಗ ಕಾರು ವಿಜಯಪುರದಲ್ಲಿರುವುದು ಕಂಡು ಬಂದಿದೆ. ಕಾರನ್ನು ಯಕ್ಷಿತ್ ಮತ್ತು ಹರೀಶ್ ಎಂಬವರು ನಕಲಿ ಆಧಾರ್ ಕಾರ್ಡ್ ಮಾಡಿಸಿ ವಿಜಯಪುರದ ವ್ಯಕ್ತಿಗೆ ಮಾರಾಟ ಒಪ್ಪಂದ ಮಾಡಿ 7 ಲಕ್ಷ ರೂ. ಪಡೆದು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Also Read  ಕಡಬ: ಮೂರನೇ ದಿನದ 'ಆಪರೇಷನ್ ಎಲಿಫೆಂಟ್' ಯಶಸ್ವಿ ➤ ಕೊನೆಗೂ ಸೆರೆಸಿಕ್ಕ ಕಾಡಾನೆ

error: Content is protected !!
Scroll to Top