ಬಶೀರ್ ಹತ್ಯೆಗೆ ಜೈಲಿನಲ್ಲೇ ಸಂಚು ಹಾಕಿದ ಆರೋಪಿಗಳು ► ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹೇಳಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.24. ಇತ್ತೀಚಿಗೆ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದ್ದ ಬಶೀರ್ ಕೊಲೆಗೆ ಜೈಲಿನಲ್ಲೇ ಸಂಚು ರೂಪಿಸಲಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೇರೆ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಿಥುನ್ ಕಲ್ಲಡ್ಕ, ತಿಲಕರಾಜ್ ಶೆಟ್ಟಿ, ರಾಜು ಅಲಿಯಾಸ್ ರಾಜೇಶ ಎಂಬವರು, ಜೈಲಿನಲ್ಲಿ ಇದ್ದುಕೊಂಡು ಕೊಟ್ಟಾರ ಚೌಕಿಯಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ್ದರು. ಅದರಂತೆ ಬಶೀರ್ ಅವರ ಬಗ್ಗೆ ಮಾಹಿತಿ ಇದ್ದ ಅನೂಪ್ ಸಹಾಯ ಪಡೆದು, ಈ ಕೃತ್ಯ ಎಸಗಿದ್ದಾರೆ. ಬಶೀರ್ ಹತ್ಯೆ ಆರೋಪಿಗಳ ಪೈಕಿ ಮೂವರು ಈಗಾಗಲೇ ಜೈಲಿನಲ್ಲಿದ್ದು, ಬಾಡಿ ವಾರಂಟ್ ಮೇಲೆ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಕಮಿಷನರ್ ಸುರೇಶ್ ತಿಳಿಸಿದ್ದಾರೆ.

Also Read  ಸರ್ಕಾರಿ ಕಚೇರಿಗಳಲ್ಲಿರುವ ವೀಲ್‍ಚೇರ್ ಗಳ ಪರಿಶೀಲನೆಗೆ ತಹಶೀಲ್ದಾರ್ ಸೂಚನೆ

error: Content is protected !!
Scroll to Top