ವಿದ್ಯುತ್ ದರ ಹೆಚ್ಚಳ ➤ ಕರ್ನಾಟಕ ಬಂದ್?

(ನ್ಯೂಸ್ ಕಡಬ)newskadaba , ಬೆಂಗಳೂರು, ಜೂ . 19 . ನೂತನ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ವಿದ್ಯುತ್ ದರ ಏರಿಕೆ ಆಗಿರುವುದರಿಂದ, ಕೈಗಾರಿಕೆಗಳಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಇದನ್ನು ಖಂಡಿಸಿ ಕರ್ನಾಟಕ ವಾಣಿಜ್ಯ ಮಂಡಳಿ ಹಾಗೂ ಕೈಗಾರಿಕಾ ಮಂಡಳಿ  ಜೂನ್.22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಇದಕ್ಕೆ ರಾಜ್ಯದ ಹಲವು ಉದ್ಯಮಿಗಳು ಹಾಗೂ ಕೈಗಾರಿಕೆಗಳು ಬೆಂಬಲ ಸೂಚಿಸಿದೆ.

ಎಫ್ ಕೆ ಸಿಸಿಐ ಎಚ್ಚರಿಕೆ ನೀಡಿದರೂ ರಾಜ್ಯ ಸರ್ಕಾರ ಯಾವುದೇ ಚರ್ಚೆ ನಡೆಸದ ಹಿನ್ನೆಲೆಯಲ್ಲಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ ಬಂದ್ ನಿರ್ಧಾರ ತೆಗೆದುಕೊಂಡಿದೆ.ವಿದ್ಯುತ್ ದರ ಇಳಿಕೆ ಸಂಬಂಧ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿತ್ತು. ಅಲ್ಲದೇ ಜೂನ್.10ರವರೆಗೆ ಗಡುವು ನೀಡಲಾಗಿತ್ತು. ಆದರೆ ಸರ್ಕಾರ ಮಾತ್ರ ಈವರೆಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಕರ್ನಾಟಕ ಬಂದ್ ಗೆ ಕರೆ ನೀಡಿರುವುದಾಗಿ ತಿಳಿಸಿದೆ ಕಾಸಿಯಾ ಹಾಗೂ ಕೆಸಿಸಿಐ ಸಂಘಟನೆ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದುತಿಳಿಸಿದ್ದಾರೆ.

Also Read  ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು

 

error: Content is protected !!
Scroll to Top