(ನ್ಯೂಸ್ ಕಡಬ) newskadaba.com ಕಡಬ, ಜೂ.19. ಪ್ರಧಾನಿ ಮೋದಿಯ ಹೆಸರಿನಲ್ಲಿ ಸ್ಕೀಂ ಇದೆ ಎಂದು ಯಾಮಾರಿಸಿದ ಯುವಕನೋರ್ವ ಮಹಿಳೆಯೋರ್ವರ ಕತ್ತಿನಲ್ಲಿದ್ದ ಸರವನ್ನು ಎಳೆದು ಪರಾರಿಯಾದ ಘಟನೆ ಮರ್ಧಾಳದಲ್ಲಿ ನಡೆದಿದೆ.

ಮರ್ಧಾಳ ನಿವಾಸಿ ಸುಶೀಲ ಎಂಬವರು ಮನೆಯಲ್ಲಿದ್ದ ವೇಳೆ ಆಗಮಿಸಿದ ಯುವಕನೋರ್ವ ಪ್ರಧಾನ ಮಂತ್ರಿ ಮೋದಿ ಹೆಸರಿನಲ್ಲಿ 1.25 ಲಕ್ಷ ರೂ. ಸ್ಕೀಮ್ ಇದೆ ಎಂದು ಯಾಮಾರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದೊಯ್ದಿದ್ದಾನೆ. ಬಳಿಕ ಇಚಿಲಂಪಾಡಿ ಕಡೆಗೆ ಬೈಕಿನಲ್ಲಿ ತೆರಳಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.















