ಬಂಟ್ವಾಳ: ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ➤ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 17. ತೋಟಕ್ಕೆ ಕೆಲಸಕ್ಕೆ ಹೋಗಿದ್ದ ವೇಳೆ ಬಾಗಿಲು ತೆರೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೂ. 15ರ ಗುರುವಾರದಂದು ಮನೆಯೊಡತಿ ಗುಣವತಿ ಎಂಬವರು ಬೆಳಗ್ಗೆ 8-30 ರ ವೇಳೆಗೆ ಮನೆಯ ಹಿಂಬಾಗಿಲನ್ನು ಮುಚ್ಚಿ ಎದುರು ಬಾಗಿಲಿಗೆ ಬೀಗ ಹಾಕಿ ತೋಟದ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಮಧ್ಯಾಹ್ನ ಸುಮಾರು 1-30ರ ವೇಳೆಗೆ ಊಟಕ್ಕೆಂದು ಮನೆಗೆ ಬಂದಾಗ ಹಿಂಬಾಗಿಲು ತೆರೆದಿರುವುದು ಕಂಡು ಬಂದಿದೆ. ಮನೆಯೊಳಗೆ ಹೋಗಿ ನೋಡಿದಾಗ ಕೋಣೆಯಲ್ಲಿ ಗೋದ್ರೆಜ್ ನ ಬಾಗಿಲು ತೆರೆದುಕೊಂಡಿತ್ತು. ನೆಲದ ಮೇಲೆ ಬಟ್ಟೆಗಳು ಚೆಲ್ಲಿಪಿಲ್ಲಿಯಾಗಿತ್ತು. ಗೋದ್ರೆಜ್ ನ ಸೇಪ್ ಲಾಕರ್ ತೆರೆದುಕೊಂಡಿದ್ದು, ಅದರೊಳಗೆ ಇರಿಸಲಾಗಿದ್ದ ಸುಮಾರು ನಾಲ್ಕೂವರೆ ಪವನ್ ತೂಕದ ಕರಿಮಣಿ ಸರ, ಒಂದುವರೆ ಪವನ್ ತೂಕದ ಬೆಂಡೋಲೆ, ಸುಮಾರು 3 ಗ್ರಾಂ ತೂಕದ ಗಣಪತಿ ಪದಕ ಹಾಗೂ ಮೂಗುತ್ತಿ ಸೇರಿದಂತೆ ಒಟ್ಟು 53 ಗ್ರಾಂ ತೂಕದ ಚಿನ್ನಾಭರಣ ಕಾಣೆಯಾಗಿದ್ದು, ಒಟ್ಟು 52 ಗ್ರಾಂ. ತೂಕದ 2,12,000 ಮೌಲ್ಯದ ಚಿನ್ನಾಭರಣಗಳು ಕಳವು ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Also Read  ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭ ► ಸುಳ್ಯದಲ್ಲಿ ಅಂಗಾರ, ಪುತ್ತೂರಿನಲ್ಲಿ ಶಕುಂತಲಾ ಶೆಟ್ಟಿ ಮುನ್ನಡೆ

 

error: Content is protected !!
Scroll to Top