ಕಡಬ: ಸೈಂಟ್ ಆನ್ಸ್ ಶಾಲಾ ಮಂತ್ರಿಮಂಡಲ ರಚನೆ ➤ ಶಾಲಾ ನಾಯಕನಾಗಿ ಅಖಿಲ್, ಉಪನಾಯಕಿಯಾಗಿ ಧೃತಿ ರೈ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 17. ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲದ ರಚನೆಗಾಗಿ ಚುನಾವಣೆ ನಡೆಸಿ ವಿದ್ಯಾರ್ಥಿ ನಾಯಕರನ್ನು ಆರಿಸಲಾಯಿತು.

ಸೈಂಟ್ ಆನ್ಸ್ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಅಮಿತ್ ಪ್ರಕಾಶ್ ರೋಡ್ರಿಗಸ್ ರವರು ಮತದಾರ ವಿದ್ಯಾರ್ಥಿಗಳ ಬೆರಳಿಗೆ ಶಾಯಿ ಗುರುತು ಹಾಕುವ ಮೂಲಕ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದರು. ಶಾಲೆಯ ಮೂರರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಶಾಲಾ ನಾಯಕನಾಗಿ ಅಖಿಲ್, ಉಪಶಾಲಾ ನಾಯಕಿಯಾಗಿ ಧೃತಿ ರೈ, ಶಿಕ್ಷಣ ಮಂತ್ರಿಯಾಗಿ ಜಿಯಾನ ಮರಿಯ, ಉಪ ಶಿಕ್ಷಣಮಂತ್ರಿಯಾಗಿ ಹಿತ, ಕ್ರೀಡಾ ಮಂತ್ರಿಯಾಗಿ ಸ್ಟೆಬಿನ್, ಉಪ ಕ್ರೀಡಾ ಮಂತ್ರಿಯಾಗಿ ತೀಕ್ಷಾ, ಶಿಸ್ತುಮಂತ್ರಿಯಾಗಿ ನಿಹಾರಿಕ, ಉಪ ಶಿಸ್ತುಮಂತ್ರಿಯಾಗಿ ಪ್ರಣಮ್, ಆರೋಗ್ಯ ಮಂತ್ರಿಯಾಗಿ ಮಹಮದ್ ಮಾಝಿನ್, ಉಪ ಆರೋಗ್ಯ ಮಂತ್ರಿಯಾಗಿ ಶ್ರೇಯಾ ರೋಸ್, ಸಾಂಸ್ಕೃತಿಕ ಮಂತ್ರಿಯಾಗಿ ಲಿಯೋನ, ಉಪಸಾಂಸ್ಕೃತಿಕ ಮಂತ್ರಿಯಾಗಿ ಕೌಶಿಕ್ ಬಿ ಆರ್ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಅಬ್ದುಲ್ ಸಮದ್, ಅರುಣ್ ಕುಮಾರ್ ಶಿಕ್ಷಕಿಯರಾದ ಪೂರ್ಣಿಮಾ ಹಾಗೂ ಲತಾ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.

Also Read  ಪಟಾಕಿ ಮಾರಾಟ ಲೈಸನ್ಸ್‌ ಗೆ ಅರ್ಜಿ ಆಹ್ವಾನ

error: Content is protected !!
Scroll to Top