(ನ್ಯೂಸ್ ಕಡಬ) newskadaba.com ಕಡಬ, ಜೂ. 17. ಇಲ್ಲಿನ ಸೈಂಟ್ ಆನ್ಸ್ ಶಾಲೆಯಲ್ಲಿ ಅಬಾಕಸ್ ಗಣಿತ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಗುರುವಾರದಂದು ನಡೆಯಿತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಅನ್ಸ್ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಅಮಿತ್ ಪ್ರಕಾಶ್ ರೋಡ್ರಿಗಸ್ ರವರು ವಹಿಸಿ ಮಾತನಾಡಿ, ಅಬಾಕಸ್ ತರಗತಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡುವುದರಿಂದ ವಿದ್ಯಾರ್ಥಿಗಳ ಬುದ್ಧಿಶಕ್ತಿ ಉತ್ತಮಗೊಳ್ಳುತ್ತದೆ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಇನ್ನಿತರ ಚಟುವಟಿಕೆಗಳಲ್ಲಿಯೂ ಪ್ರಗತಿ ಸಾಧಿಸುತ್ತಾರೆ ಎಂದು ಹೇಳಿದರು. ಅಬಾಕಸ್ ತರಗತಿಯ ಬಗ್ಗೆ ತರಬೇತಿ ನೀಡಲು ಮುಖ್ಯ ಅತಿಥಿಯಾಗಿ ಆಗಮಿಸಿದ IRCMD ಎಜುಕೇಶನ್ ಸೆಂಟರ್ ಪುತ್ತೂರು ಮತ್ತು ಸುಳ್ಯ ಇದರ ಸಿಇಓ ಆಗಿರುವ ಪ್ರಫುಲ್ಲ ಗಣೇಶ್ ರವರು ಅಬಾಕಸ್ ತರಗತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿಯನ್ನು ನೀಡಿದರು. ಸಹಶಿಕ್ಷಕಿ ಶ್ರೀಮತಿ ಶಿಲ್ಪ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಶೈನಸ್ ರವರು ವಂದಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ದಿವ್ಯಜ್ಯೋತಿಯವರು ನಿರೂಪಿಸಿದರು.