ಮಂಗಳೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ ► ನಿದ್ರಿಸುತ್ತಿದ್ದ ವ್ಯಕ್ತಿಯ ಕೊಂದ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.23. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಬೆಂಗ್ರೆ ನಿವಾಸಿ ಶಿವರಾಜ್ ಕರ್ಕೆರಾ(39) ಎಂಬವರ ಹತ್ಯೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ತಣ್ಣೀರುಬಾವಿ ಶ್ರೀದೇವಿ ನಿಲಯ ನಿವಾಸಿ ಸುನಿಲ್ ಪೂಜಾರಿ (32), ಮಂಗಳೂರು ತಣ್ಣೀರುಬಾವಿ ಗಣಪತಿ ಕಟ್ಟೆ ನಿವಾಸಿ ಧೀರಜ್ (25), ಹಾಗೂ ಮಂಗಳೂರು ತಣ್ಣೀರುಬಾವಿ ಸಮೀಪದ ಮಲ್ಲೇಶ ಯಾನೆ ಮಾದೇಶ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಸೋಮವಾರದಂದು ಬೆಳಗ್ಗಿನ ಜಾವ ಹಳೆಯ ವೈಯಕ್ತಿಕ ದ್ವೇಷಕ್ಕಾಗಿ ಶಿವರಾಜ್‌ರವರನ್ನು ಬರ್ಬರವಾಗಿ ಕಡಿದು ಕೊಲೆಗೈದಿದ್ದರು. ಈ ಬಗ್ಗೆ ತನಿಖೆ ನಡೆಸಿರುವ ಪಣಂಬೂರು ಪೊಲೀಸರು ಮೂವರನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಕಾರ್ಯಚರಣೆ ಮುಂದುವರಿಸಿದ್ದಾರೆ.

Also Read  ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಅನ್ಯಧರ್ಮದ ವ್ಯಕ್ತಿಗೆ ಹಲ್ಲೆ - ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

error: Content is protected !!
Scroll to Top