ಸುಳ್ಯ ಪೊಲೀಸ್ ಉಪನಿರೀಕ್ಷರಾಗಿ ಈರಯ್ಯ ದೂಂತುರು ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 16. ಸುಳ್ಯ ಠಾಣಾ ಉಪನಿರೀಕ್ಷಕರಾಗಿ ಈರಯ್ಯ ದೂಂತುರು ಅವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ. ಕಳೆದ ಎರಡು ವರ್ಷಗಳಿಂದ ಸುಳ್ಯ ಎಸ್ಐ ಆಗಿದ್ದ ದಿಲೀಪ್ ಜಿ.ಆರ್. ಅವರಿಗೆ ವರ್ಗಾವಣೆಯಾಗಿದೆ.

2014ನೇ ಬ್ಯಾಚ್ ನ ಅಧಿಕಾರಿಯಾಗಿರುವ ಈರಯ್ಯ ದೂಂತುರು ಅವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೆಷನರಿ ಎಸ್.ಐ ಆಗಿ ಬೆಳ್ಳಾರೆ ಠಾಣೆಯಲ್ಲಿ ಉಪನಿರೀಕ್ಷಕರಾಗಿದ್ದರು. ಬಳಿಕ ಉಪ್ಪಿನಂಗಡಿ, ಶಿರಸಿಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ಕುಂದಾಪುರದಲ್ಲಿ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Scroll to Top