ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.22. ಗೃಹರಕ್ಷಕ ದಳದಲ್ಲಿ ಖಾಲಿಯಿರುವ ಗೃಹರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಗೃಹರಕ್ಷಕ ಸದಸ್ಯತ್ವಕ್ಕೆ ಸೇರಲು ಆಸಕ್ತಿ ಉಳ್ಳ ಅಭ್ಯರ್ಥಿಗಳು ಜನವರಿ 25 ರೊಳಗೆ ಜಿಲ್ಲಾ ಕಛೇರಿಗೆ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿ ನಮೂನೆಗಳನ್ನು ಜಿಲ್ಲಾ ಗೃಹರಕ್ಷಕ ದಳ ಕಛೇರಿ, ಮೇರಿಹಿಲ್ ಮಂಗಳೂರು ಇಲ್ಲಿಂದ ಪಡೆಯಬಹುದು. ಕನಿಷ್ಠ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ ಆಗಿರಬೇಕು. ಹೆಚ್ಚಿನ ವಿವರಕ್ಕೆ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ: 0824-2220562 ನಂಬರನ್ನು ಸಂಪರ್ಕಿಸಬಹುದು. ಮುಂಬರುವ ಚುನಾವಣೆಯನ್ನು ದೃಷ್ಠಿಯಲ್ಲಿರಿಸಿಕೊಂಡು ಖಾಲಿ ಇರುವ 185 ಗೃಹರಕ್ಷಕರನ್ನು ಭರ್ತಿ ಮಾಡಲಾಗುತ್ತಿದೆ  ಎಂದು ಪ್ರಕಟಣೆ ತಿಳಿಸಿದೆ.

Also Read  ಉಪ್ಪಿನಂಗಡಿ: ಮದ್ಯದ ಅಮಲಿನಲ್ಲಿ ಬಸ್ ಗೆ ಕಲ್ಲೆಸೆದ ಕಾರ್ಮಿಕ

error: Content is protected !!
Scroll to Top