ದುಗ್ಗಲಡ್ಕ: ರಿಕ್ಷಾದಿಂದ ಬಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ದುಗ್ಗಲಡ್ಕ . 20: ದುಗ್ಗಲಡ್ಕ ನೀರಬಿದಿರೆ(ಕೊಯಿಕುಳಿ ಶಾಲಾ ಬಳಿ) ರಿಕ್ಷಾದಿಂದ ಬಿದ್ದು ಗಂಭೀರ ಗಾಯಗೊಂಡ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಳೆದ ದಿನ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಲಲಿತ(40) ಎಂದು ಗುರುತಿಲಾಗಿದೆ.

 

 

ಸಂಬಂಧಿಕರಾದ ನಾಗೇಶ್ ಎಂಬವರ ರಿಕ್ಷಾದಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಆರ್ತಾಜೆ ಸಮೀಪ ರಿಕ್ಷಾದಿಂದ ರಸ್ತೆಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕಳೆದ ದಿನ ಮೃತಪಟ್ಟಿದ್ದಾರೆ.

 

Xl

 

Scroll to Top