ಜಾಗದ ವಿಚಾರ- ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದು, ಬೆದರಿಕೆಯೊಡ್ಡಿದ ಪುತ್ರಿಯರು..! ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮುಲ್ಕಿ, ಜೂ. 14. ಜಾಗದ ವಿಚಾರವಾಗಿ ಹೆತ್ತ ತಾಯಿಗೆ ಪುತ್ರಿಯರಿಬ್ಬರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಬೆದರಿಕೆಯೊಡ್ಡಿರುವ ಕುರಿತು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದವರನ್ನು ಮನೋರಮಾ ಹೆನ್ರಿ ಎಂದು ಗುರುತಿಸಲಾಗಿದೆ. ಮಕ್ಕಳಾದ ಅನಿಟಾ ಸೋನ್ಸ್ ಮತ್ತು ಸ್ಯಾಂಡ್ರಾ ಬಂಗೇರ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ ಜಾಗದ ವಿಚಾರವಾಗಿ ತಾಯಿ ಹಾಗೂ ಮಕ್ಕಳ ನಡುವೆ ಜಗಳ ನಡೆದಿದ್ದು, ಈ ಸಂದರ್ಭ ಅನಿಟಾ “ನನ್ನ ಮನೆಯ ಅಡುಗೆ ಕೋಣೆಯೊಳಗೆ ಅಕ್ರಮವಾಗಿ ನುಗ್ಗಿ ನನ್ನನ್ನು ದುರುಗುಟ್ಟಿ ನೋಡಿ ತಡೆದು ನಿಲ್ಲಿಸಿ, ಅವಳ ಕೈಯಲ್ಲಿದ್ದ ನಾಯಿಗೆ ಊಟ ಹಾಕುವ ತಟ್ಟೆಯಿಂದ ಹೊಡೆದಿದ್ದಾಳೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮನ್ನು ಕೊಂದು ಹೋಗುವುದು” ಎಂದು ಬೆದರಿಕೆ ಹಾಕಿದ್ದಾಳೆ. ಇದೇ ವೇಳೆ ಮನೆಯ ಹೊರಗಿದ್ದ ಇನ್ನೋರ್ವ ಪುತ್ರಿ ಸ್ಯಾಂಡ್ರಾ ಬಂಗೇರಳು ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿರುವುದಾಗಿ ಮನೋರಮಾ ಅವರು ಆರೋಪಿಸಿದ್ದಾರೆ.

Also Read  ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

error: Content is protected !!
Scroll to Top