ಎಚ್ಚರಿಕೆಗೆ ಕ್ಯಾರೇ ಎನ್ನದೇ ಸಮುದ್ರಕ್ಕೆ ಇಳಿದ ಬಾಲಕ-ನೀರುಪಾಲು

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 13. ಎಷ್ಟೇ ಎಚ್ಚರಿಸಿದರೂ ಕ್ಯಾರೇ ಎನ್ನದೇ ಸುಮದ್ರಕ್ಕಿಳಿದಿದ್ದ ಮೂವರ ಪೈಕಿ ಓರ್ವ ಮೃತಪಟ್ಟು, ಇನ್ನಿಬ್ಬರು ಸಮುದ್ರಕ್ಕೆ ಇಳಿದು ನಾಪತ್ತೆಯಾಗಿರುವ ಘಟನೆ ಮುಂಬೈನ ಜುಹು ಬೀಚ್ ನಲ್ಲಿ ನಡೆದಿದೆ.

12 ರಿಂದ 16 ವರ್ಷ ವಯಸ್ಸಿನ ಐದು ಹುಡುಗರ ಗುಂಪೊಂದು, ಜೀವರಕ್ಷಕ ದಳದವರ ಎಚ್ಚರಿಕೆಗೆ ಮಣಿಯದೇ ಸಮುದ್ರಕ್ಕಿಳಿದು, ನಂತರ ದಡದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ನಾಪತ್ತೆಯಾಗಿದ್ದರು. ಈ ಪೈಕಿ  ಇಬ್ಬರು ಬಾಲಕರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದು, ಓರ್ವ ಆಸ್ಪತ್ರೆಗೆ ಕರೆತಂದ ಕೂಡಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಿಫರ್‌ಜೋಯ್ ಚಂಡಮಾರುತವು ಅರಬ್ಬಿ ಸಮುದ್ರದ ಮೇಲೆ ಬೀಸುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಜೂನ್ 15 ರಂದು ಗುಜರಾತ್ ಕರಾವಳಿಯಲ್ಲಿ ಬಿಪರ್ ಜೋಯ್ ಚಂಡಮಾರುತ ಅಪ್ಪಳಿಸುವ ಭೀತಿ ಹಿನ್ನೆಲೆ ಜನರು ಮತ್ತು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

Also Read  ತಡರಾತ್ರಿ ಪಟ್ರೋಲ್ ಬಂಕ್ ನಲ್ಲಿ ಕಳ್ಳರ ಕರಾಮತ್ತು ➤ 70 ಸಾವಿರ ನಗದು ದರೋಡೆ

 

 

error: Content is protected !!
Scroll to Top