ರಾಜ್ಯ ಸರಕಾರದಿಂದ ರೈತರ ಸಾಲಮನ್ನಾ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.21. ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಪಡೆದಿದ್ದ 50 ಸಾವಿರ ರೂ. ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಘೋಷಿಸಿದ್ದಾರೆ.

ಜೂ.20ರವರೆಗೆ ಪಡೆದುಕೊಂಡಿರುವ ಪ್ರತೀ ರೈತರ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಇದರಿಂದಾಗಿ ಸುಮಾರು 22,27,506 ರೈತರು ಪ್ರಯೋಜನ ಪಡೆಯಲಿದ್ದಾರೆ. ಇದರಿಂದ ರಾಜ್ಯ ಸರಕಾರಕ್ಕೆ 8,165 ಕೋಟಿ ರೂ. ಹೊರೆ ಬೀಳಲಿದೆ ಎಂದವರು ಹೇಳಿದರು.

Also Read  ಪ್ರಥಮ ಪಿಯುಸಿಯಲ್ಲಿ ಫೇಲ್‌ ಆದ​ವರಿಗೂ ‘ಪಾಸ್‌ ಭಾಗ್ಯ​’

error: Content is protected !!
Scroll to Top