ಬಂಟ್ವಾಳ: ಮೊದಲ ಮಳೆಗೆ ತಾಲೂಕಿನ ವಿವಿಧೆಡೆ ಹಾನಿ ➤ ಮನೆಗಳು ಭಾಗಶಃ ಕುಸಿತ

(ನ್ಯೂಸ್ ಕಡಬ) newskadaba.com ಬಂಟ್ವಾಳಜೂ. 12. ಪ್ರಥಮ‌ ಅಲ್ಪಸ್ವಲ್ಪ ಮಳೆಗೆ ಬಂಟ್ವಾಳ ತಾಲೂಕಿನಲ್ಲಿ ಕೆಲವು ಕಡೆಗಳಲ್ಲಿ ಸಣ್ಣಪ್ರಮಾಣದ ಹಾನಿಯಾದ ಬಗ್ಗೆ ವರದಿಯಾಗಿದೆ.

ಕಳೆದೆರಡು ದಿನಗಳಿಂದ ಸ್ವಲ್ಪ ಮಳೆಯಾಗುತ್ತಿದ್ದು, ಇದರಿಂದ ಕೆಲವೆಡೆ ಹಾನಿ ಸಂಭವಿಸಿದ ಕುರಿತು ಕಂದಾಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಬಂಟ್ವಾಳ ತಾಲೂಕು ಕೇಪು ಗ್ರಾಮದ ಮೈರ ಎಂಬಲ್ಲಿ ಸತೀಶ್ ಎಂಬವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿರುತ್ತದೆ. ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಪಿಲಿಂಜ ಎಂಬಲ್ಲಿ ದೇವಕಿ ಪೂಜಾರಿಯವರ ವಾಸ್ತವ್ಯದ ಮನೆ, ಮಾಣಿಮಜಲು ವಾರಿಜಾ ಅವರ ಮನೆ ಹಾನಿಗೊಂಡಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

Also Read  ಪದವಿನಂಗಡಿ: ಸರಣಿ ಅಪಘಾತ; ಮಹಿಳೆ ಮೃತ್ಯು

error: Content is protected !!
Scroll to Top