ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ಇತ್ತಂಡಗಳ ನಡುವೆ ಹೊಡೆದಾಟ ➤ 8 ಮಂದಿಯ ವಿರುದ್ದ FIR

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ. 12. ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆಸಿದ 8 ಮಂದಿ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

 

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ತಂಡಗಳ ನಡುವೆ ಬಸ್ ನಿಲ್ದಾಣದಲ್ಲಿ ಹೊಡೆದಾಟ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಇತ್ತಂಡಗಳನ್ನು ಸಮಾಧಾನಿಸಿ ಚದುರಿಸಲು ಯತ್ನಿಸಿದ್ದಾರೆ. ಆದರೂ ಇದನ್ನು ಲೆಕ್ಕಿಸದೆ ಹೊಡೆದಾಟದಲ್ಲಿ ತೊಡಗಿದ್ದ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ಗಿರೀಶ್ (21), ಅಭಿಷಿತ್ (20), ಧನುಷ್ (19), ಮೋಹನ್ (19) ನಂದನ್ (19), ವಿನ್ಯಾಸ್ (18), ರೂಪೇಶ್(20) ಹಾಗೂ ಹಿತೇಶ್(19) ಎಂಬವರನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Also Read  ಸುಳ್ಯ, ಬೆಳ್ಳಾರೆ ಪರಿಸರದಲ್ಲೂ ಗುಡುಗು ಮಿಶ್ರಿತ ಭಾರೀ ಗಾಳಿ ಮಳೆ

error: Content is protected !!
Scroll to Top